ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕೀಯಕ್ಕೆ ಭಾಸ್ಕರ್ ರಾವ್ : ಎ.4 ರಂದು ‘AAP’ ಗೆ ಎಂಟ್ರಿ

ಬೆಂಗಳೂರು: ರೈಲ್ವೆ ಪೊಲೀಸ್ ಎಡಿಜಿಪಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ಎ.4ರಂದು ಆಮ್ ಆದ್ಮಿ ಪಕ್ಷವನ್ನು ಸೇರಲಿದ್ದಾರೆ. ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಎಎಪಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಅವರು ಪಕ್ಷ ಸೇರಲಿದ್ದಾರೆ.

ಈ ಸಂದರ್ಭದಲ್ಲಿ ಮನೀಶ್ ಸಿಸೋಡಿಯಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತಿತರರು ಹಾಜರಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸ್ಥಾನದಿಂದ ವರ್ಗಾವಣೆಗೊಂಡ ಬಳಿಕ, ಅವರು ಸರ್ಕಾರಕ್ಕೆ ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ರಾಜ್ಯ ಸರ್ಕಾರ ನಿನ್ನೆ ಒಪ್ಪಿಗೆ ಸೂಚಿಸಿ, ಸ್ವಯಂ ನಿವೃತ್ತಿಗೆ ಶರಾ ಹಾಕಿದೆ.

Edited By : Nirmala Aralikatti
PublicNext

PublicNext

03/04/2022 03:44 pm

Cinque Terre

41.98 K

Cinque Terre

2

ಸಂಬಂಧಿತ ಸುದ್ದಿ