ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಭುಗಿಲೆದ್ದಿದೆ. ಜನತೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಯುಗಾದಿ ಹಬ್ಬವನ್ನ ಆಚರಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕ್ರಮ ಕೈಗೊಳ್ಳು ಆಯಾ ಜಿಲ್ಲೆಯ ಎಸ್ಪಿ ಹಾಗೂ ಡಿಸಿಗಳಿಗೆ ಸೂಚಿಸಲಾಗಿದೆ ಅಂತಲೇ ಸಿಎಂ ಬೊಮ್ಮಾಯಿ ಇಂದು ಸುದ್ದಿಗಾರರ ಎದುರು ಹೇಳಿದ್ದಾರೆ.
ಎಲ್ಲರಿಗೂ ಅವರವರ ಧರ್ಮ,ಹಬ್ಬಗಳ ಆಚರಣೆಗೆ ಸ್ವಾತಂತ್ಯ ಇದೆ. ಹೀಗಿರೋವಾಗ ಯಾರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳಬೇಡಿ ಅಂತಲೇ ಸಿಎಂ ಮನವಿ ಮಾಡಿದ್ದಾರೆ.
PublicNext
02/04/2022 12:31 pm