ನವದೆಹಲಿ : ದುಬಾರಿ ದುನಿಯಾದಲ್ಲಿ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಮತ್ತು ಹಣದುಬ್ಬರ, ದೇಶದ ಆರ್ಥಿಕತೆ ಬಗ್ಗೆ ಸದಾ ಖಚಿತವಾಗಿ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ನಿತ್ಯ ಯಾವ ವಿಷಯಗಳ ಬಗ್ಗೆ ಯೋಚಿಸುತ್ತಾರೆ ಎಂದು ಲಿಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿಗಳು ಪ್ರತಿದಿನ ಯೋಚನೆ ಮಾಡುವ ಕಾರ್ಯಗಳು ಇವೆ
1.ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು?
2.ಯುವಕರಿಗೆ ಉದ್ಯೋಗದ ಖಾಲಿ ಕನಸುಗಳನ್ನು ತೋರಿಸುವುದು ಹೇಗೆ?
3. ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು?
4.ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ?
ಎಂಬ ವಿಷಯಗಳ ಬಗ್ಗೆ ಯೋಚಿಸುತಾರೆ. ಇವು ಪ್ರಧಾನ ಮಂತ್ರಿಗಳ ದೈನಂದಿನ ಪಟ್ಟಿಯಲ್ಲಿರುತ್ತವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟರ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
PublicNext
30/03/2022 05:14 pm