ನವದೆಹಲಿ: 'ದಿ ಕಾಶ್ಮೀರ ಪಂಡಿತ್' ಸಿನಿಮಾ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿಯ ಮಾಜಿ ಸಚಿವ, ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, "ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡವನ್ನು ಸುಳ್ಳು ಎಂದು ಕರೆಯುವುದು ಎಂದರೆ ನಿಮ್ಮ ತಾಯಿಯ ಚಾರಿತ್ರ್ಯವನ್ನು ಪ್ರಶ್ನಿಸಿದಂತೆ. ಕೇಜ್ರಿವಾಲ್ ಅವರೇ ನಾಚಿಕೆ ಆಗುತ್ತಿದೆ. ಭಯೋತ್ಪಾದಕರನ್ನು ರಕ್ಷಿಸುವ ಮೂಲಕ ಕೇಜ್ರಿವಾಲ್ ದೇಶದ ಪ್ರತಿಯೊಬ್ಬ ಹುತಾತ್ಮ ಮತ್ತು ಸೇನಾ ಸಿಬ್ಬಂದಿಯನ್ನು ಅವಮಾನಿಸಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಕಪಿಲ್ ಮಿಶ್ರಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, 'ಇದು ಖಂಡನೀಯ ಮಾತ್ರವಲ್ಲ, ಅತ್ಯಂತ ನಾಚಿಕೆಗೇಡಿನ ಮತ್ತು ದುಃಖಕರವೂ ಆಗಿದೆ' ಎಂದು ಅಸಮಾಧಾನ ಹೊರ ಹಾಕಿದ್ದಾರೆ.
PublicNext
25/03/2022 12:58 pm