ನವದೆಹಲಿ: ಇನ್ಮುಂದೆ 60 ಕಿಲೋ ಮೀಟರ್‌ಗೆ ಒಂದೇ ಒಂದು ಟೋಲ್ ಸಂಗ್ರಹ ಕೇಂದ್ರ ಇರುತ್ತದೆ. ಈಗ ಇರೋ ಹೆಚ್ಚಿನ ಟೋಲ್ ಕೇಂದ್ರಗಳನ್ನ ಮುಂದಿನ ಮೂರು ತಿಂಗಳಲ್ಲಿ ಬಂದ್ ಮಾಡಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳುವ ಮೂಲಕ ಈಗ ವಾಹನ ಸವಾರರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ದೇಶದ ಎಲ್ಲ ಹೆದ್ದಾರಿಯ ಟೋಲ್ ಕೇಂದ್ರಗಳಿಗೂ ಇದು ಅನ್ವಯಿಸುತ್ತದೆ. ಇಲ್ಲಿ ಸದ್ಯಕ್ಕೆ ಜಾಸ್ತಿ ಟೋಲ್ ಸಂಗ್ರಹ ಕೇಂದ್ರಗಳಿವೆ. ಮುಂದಿನ ಮೂರು ತಿಂಗಳಲ್ಲಿ ಕೇವಲ 60 ಕಿಲೋ ಮೀಟರ್‌ಗೆ ಒಂದು ಟೋಲ್ ಸಂಗ್ರಹ ಕೇಂದ್ರ ಇರುತ್ತದೆ ಎಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಹೆದ್ದಾರಿ ಬಜೆಟ್ ಕುರಿತು ನಡೆದ ಚರ್ಚೆಯಲ್ಲಿ ನಿತಿನ್ ಗಡ್ಕರಿ ಈ ವಿಷಯವನ್ನ ಹೇಳಿದ್ದಾರೆ.
PublicNext
23/03/2022 11:08 am