ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ವಿಧಾನಸಭೆ ತೆಗೆದುಕೊಂಡ ನಿರ್ಧಾರ 'ಕಾನೂನು ಬಾಹಿರ' ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಒಂದು ರಾಜ್ಯದ ಹಕ್ಕನ್ನ ಇನ್ನೊಂದು ರಾಜ್ಯ ಅತಿಕ್ರಮಿಸುವಂತ ಜನ ವಿರೋಧಿ ನಿರ್ಣಯ ಇದಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ನಂಬಿಕೆ ಇಲ್ಲದೆ ನಿರ್ಣಯ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ತಮಿಳುನಾಡಿನ ಈ ನಿರ್ಧಾರವನ್ನ ಇಡೀ ಕರ್ನಾಟಕ ಖಂಡಿಸುತ್ತದೆ. ಮೇಕೆದಾಟು ಯೋಜನೆ ಜಾರಿಗೆ ವಿಷಯದಲ್ಲಿ ನಮ್ಮ ನಿರ್ಧಾರ ಗಟ್ಟಿ ಆಗಿದೆ ಅಂತಲೇ ವಿವರಿಸಿದ್ದಾರೆ.
PublicNext
22/03/2022 10:10 am