ಚಿಕ್ಕಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಮಹತ್ವಾಕಾಂಕ್ಷೆ ಯೋಜನೆ "ಕಂದಾಯ ದಾಖಲೆ ಮನೆ ಬಾಗಿಲಿಗೆ" ಯೋಜನೆಗೆ ಇಂದು ಚಾಲನೆ ಕೊಡಲಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿಯಲ್ಲಿ ಕಂದಾಯ ದಾಖಲೆ ಮನೆ ಕಾರ್ಯಕ್ರಕಮಕ್ಕೆ ಚಾಲನೆ ಕೊಡ್ತಿದ್ದಾರೆ.
ಈ ಗ್ರಾಮದಲ್ಲಿ ಒಟ್ಟು 171 ಕುಟುಂಬಳಿವೆ. 977 ಜನ ವಾಸವಿದ್ದಾರೆ. ಇವರಲ್ಲಿ 157 ಜನ ಖಾತೆದಾರರಿದ್ದಾರೆ. ಈ ಗ್ರಾಮಕ್ಕೆ ಬರ್ತಿರೋ ಮುಖ್ಯಮಂತ್ರಿಗಳು ಇಲ್ಲಿಯ ಈ ಗ್ರಾಮಸ್ಥರಿಗೆ ಪಹಣಿ,ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನ ಉಚಿತವಾಗಿಯೇ ವಿತರಿಸಲಿದ್ದಾರೆ.
PublicNext
12/03/2022 07:35 am