ಗೋರಖ್ ಪುರ ಲೋಕಸಭಾ ಕ್ಷೇತ್ರದಿಂದಲೇ ಸಂಸದರಾಗಿ ಆಯ್ಕೆಯಾಗಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮತ್ತೆ ಸ್ವಕೇತ್ರದಿಂದಲೇ ಕಣಕ್ಕಿಳಿದು ಭರ್ಜರಿ ಜಯ ಗಳಿಸಿದ್ದಾರೆ.ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದ ಮುಂದಿನ ಬಿಜೆಪಿ ಸಿಎಂ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಎಂದು ಘೋಷಿಸಲಾಗಿತ್ತು. ಸದ್ಯ ಆ ಮಾತು ಹುಸಿಯಾಗಿಲ್ಲ.
ಸಮಾಜವಾದಿ ಪಕ್ಷದ ಅಭ್ಯರ್ಥಿ ಶುಭಾವತಿ ಶುಕ್ಲಾ ಮತ್ತು ಆಜಾದ್ ಸಮಾಜ್ ಪಕ್ಷದ ಚಂದ್ರಶೇಖರ್ ವಿರುದ್ಧ ಯೋಗಿ ಗೆದ್ದು ಬೀಗಿದ್ದಾರೆ. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿ ಯೋಗಿ ಆದಿತ್ಯನಾಥ್ ಅವರು ಕೊನೆಯಲ್ಲಿ 1 ಲಕ್ಷದ 2 ಸಾವಿರ ಮತಗಳ ಅಂತದಿಂದ ಜಯಗಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 5 ವರ್ಷದ ಅಧಿಕಾರವನ್ನು ಪೂರ್ಣಗೊಳಿಸಿ ಮರು ಆಯ್ಕೆಯಾದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೂ ಯೋಗಿ ಭಾಜನರಾಗಿದ್ದಾರೆ.
PublicNext
10/03/2022 05:05 pm