ಬೆಂಗಳೂರು: ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೆ ಏರುವ ಭರವಸೆ ಮೂಡಿಸಿದೆ. ಈ ವಿಚಾರವಾಗಿ ಮಾತನಾಡಿರುವ ಸಚಿವ ಆರ್.ಅಶೋಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರೇ ಪಾದಯಾತ್ರೆ ಬೇಡ, ತೀರ್ಥ ಯಾತ್ರೆ ಮಾಡಿ. ಬಿಜೆಪಿ ಮತ್ತೆ ಮತ್ತೆ ಜಯಬೇರಿ ಬಾರಿಸ್ತಿದೆ. 5 ರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯದಲ್ಲಿ ಬಿಜೆಪಿ ಜಯ ಗಳಿಸುತ್ತಿದೆ. ಪಂಚರಾಜ್ಯಗಳ ಪೈಕಿ ಕಾಂಗ್ರೆಸ್ಗೆ ಪಾಲಿಗೆ ಇದ್ದದ್ದು, ಪಂಜಾಬ್ ಮಾತ್ರ. ಈಗ ಪಂಜಾಬ್ನಲ್ಲೂ ಹೀನಾಯವಾಗಿ ಸೋತಿದ್ದಾರೆ. ಜನರ ದಿಕ್ಸೂಚಿ ಫಲಿತಾಂಶ ಇದು. ಮುಂದೆ ಕರ್ನಾಟಕದಲ್ಲೂ ಇದೇ ಫಲಿತಾಂಶ ಬರಲಿದೆ ಎಂದರು.
ಸಾರ್ವತ್ರಿಕ ಚುನಾವಣೆ ಹತ್ತಿರ ಆಗುತ್ತಿದಂತೆ, ಕರ್ನಾಟಕದಲ್ಲೂ ಬಿಜೆಪಿ ಅಲೆ ಎಳಲಿದೆ. ಕಾಂಗ್ರೆಸ್ನವರು ಮೇಕೆದಾಟು ಪಾದಯಾತ್ರೆ ಮಾಡಿ ಕೊರೊನಾ ಸೋಂಕು ಹೆಚ್ಚಳ, ಟ್ರಾಫಿಕ್ ಜಾಮ್ ಕಿರಿಕಿರಿ ಉಂಟು ಮಾಡಿದ್ದರು. ಈ ಕುರಿತು ಜನ ಕಾಂಗ್ರೆಸ್ನವರಿಗೆ 'ಪಾದಯಾತ್ರೆ ಬೇಡ, ತೀರ್ಥ ಯಾತ್ರೆ ಮಾಡಿ' ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.
PublicNext
10/03/2022 01:51 pm