ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Goa Election: ತಂದೆಯ ಕ್ಷೇತ್ರದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದು ಸೋತ ಪರಿಕ್ಕರ್​​ ಮಗ

ಪಣಜಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಣೆಯಾಗುತ್ತಿದ್ದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಪಣಜಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಸೋಲು ಕಂಡಿದ್ದಾರೆ.

ಗೋವಾದ ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು, ಬಿಜೆಪಿ ಅಭ್ಯರ್ಥಿ ಬಾಬುಷ್ ಮೊನ್ಸೆರಾಡ್ ವಿರುದ್ಧ 600ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕಳೆದ 25 ವರ್ಷಗಳಿಂದಲೂ ಮನೋಹರ್ ಪರಿಕ್ಕರ್​ ಪ್ರತಿನಿಧಿಸುತ್ತಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಉತ್ಪಲ್​​ ಬದಲಿಗೆ ಪಟ್ನೇಕರ್​​ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಹೈಕಮಾಂಡ್​ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಪರಿಕ್ಕರ್ ಮಗ ಉತ್ಪಲ್​ ತಾವು ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿ, ತಂದೆಯ ಕ್ಷೇತ್ರದಿಂದಲೇ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿ, ಸೋಲಿಗೆ ಗುರಿಯಾಗಿದ್ದಾರೆ.

Edited By : Vijay Kumar
PublicNext

PublicNext

10/03/2022 12:35 pm

Cinque Terre

44.84 K

Cinque Terre

1

ಸಂಬಂಧಿತ ಸುದ್ದಿ