ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಮಾರ್ಚ್ 10 ರಂದು ಹೊರಬೀಳಲಿದೆ. ಈಗಾಗಲೇ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಯಲ್ಲಿ ಗೋವಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಿವೆ.ಈ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಗೋವಾಗೆ ತೆರಳುವಂತೆ ಕೇಂದ್ರದಿಂದ ಆದೇಶ ಬಂದಿದೆ.
ಚುನಾವಣೆಗೂ ಮುನ್ನ ಈ ಹಿಂದೆ ಗೋವಾದ ಕಾಂಗ್ರೆಸ್ ನಾಯಕರು ಪಕ್ಷವನ್ನ ತೊರೆಯದಂತೆ, ಪಕ್ಷಾಂತರ ಮಾಡದಂತೆ ದೇವರ ಮೇಲೆ ಆಣೆ ಮಾಡಿಸಿದ್ದ ಕಾಂಗ್ರೆಸ್ ಈಗ ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಹಿನ್ನಲೆಯಲ್ಲಿ ಅಧಿಕಾರ ಹಿಡಿಯಲು ಕೈ ಕಸರತ್ತು ನಡೆಸುತ್ತಿದೆ.
PublicNext
08/03/2022 07:54 pm