ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸದ್ಯ ಪಂಚರಾಜ್ಯದ ಚುನಾವಣೆ ಮುಗಿಸಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಮಾರ್ಚ್-10 ರಂದು ಬರುವ ಫಲಿತಾಂಶವನ್ನ ಎದುರು ನೋಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಕೂಡ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತಾರೆ ಅನ್ನೋ ಮಾತು ಈಗಲೇ ಕೇಳಿ ಬರುತ್ತಿದೆ.
ಹೌದು. ರಾಬರ್ಟ್ ವಾದ್ರಾ ತಮ್ಮ ಸ್ವತಃ ಊರು ಮೊರದಾಬಾದ್ ನಿಂದಲೇ ಸ್ಪರ್ಧಿಸೋ ಇಂಗಿತ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ವಿಷಯವನ್ನ ಹೇಳಿಕೊಂಡಿದ್ದಾರೆ.
ಚುನಾವಣೆ ಇರಲಿ ಬಿಡಲಿ, ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಮಸೀದಿ ಮತ್ತು ಚರ್ಚ್‌ಗಳಿಗೂ ಆಗಾಗ ಹೋಗ್ತಾ ಇರುತ್ತೇನೆ.ಹೀಗಿರೋವಾಗ ಈಗಾಗಲೇ ನನಗೆ ಮೊರದಾಬಾದ್ ಅಥವಾ ಉತ್ತರ ಪ್ರದೇಶದಿಂದ ಸ್ಪರ್ಧಿಸಿ ಅಂತಲೇ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ನನ್ನ ಮೇಲೆ ಮತದಾರರಿಗೆ ಬಹಳಷ್ಟು ವಿಶ್ವಾಸ ಇದೆ.ಆದ್ದರಿಂದಲೇ 2024 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ಒತ್ತಡ ಇದೆ. ಇಲ್ಲಿ ಸರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ.ಆದರೆ ಜನಸೇವೆಯನ್ನ ಮಾಡ್ತಾನೇ ಇರುತ್ತೇನೆ ಅಂತಲೇ ರಾಬರ್ಟ್ ವಾದ್ರಾ ಹೇಳಿಕೊಂಡಿದ್ದಾರೆ.
PublicNext
08/03/2022 10:35 am