ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಂ ಪೊಲೀಸರು ಟೋಪಿ ಹಾಕ್ತಿನಿ ಕ್ಯಾಪ್ ಹಾಕಲ್ಲ ಅಂದ್ರೆ ನಡೆಯುತ್ತದೆಯೇ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಮೈಸೂರು: ಪೊಲೀಸ್ ಇಲಾಖೆಯಲ್ಲಿರೋ ಮುಸ್ಲಿಂ ಪೊಲೀಸರು ನಾನು ಕ್ಯಾಪ್ ಹಾಕೋದಿಲ್ಲ. ಟೋಪಿ ಹಾಕುತ್ತೇನೆ ಅಂದ್ರೆ ನಡೆಯುತ್ತದೆಯೇ ? ಹಿಜಾಬ್‌ ವಿಷಯವೂ ಹಾಗೇನೆ ಅಂತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಡಕ್ ಆಗಿಯೇ ಇಂದು ಉತ್ತರ ಕೊಟ್ಟಿದ್ದಾರೆ.

ಶಾಲಾ-ಕಾಲೇಜುಗಳಲ್ಲಿಯೇ ಸಮಸ್ತ್ರ ಕಡ್ಡಾಯ ಅಂತಲೇ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹಿಜಾಬ್ ಮತ್ತು ಕೇಸರಿ ಶಾಲ್‌ಗೆ ಬ್ರೇಕ್ ಹಾಕಲು ಪ್ರಯತ್ನ ಮಾಡಿದೆ.

ಈ ಹಿನ್ನೆಲೆಯಲ್ಲಿಯೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೈಸೂರಿನಲ್ಲಿ ಮಾತನಾಡಿದ್ದಾರೆ. ಶಾಲಾ-ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ. ಇದನ್ನ ಎಲ್ಲರೂ ಪಾಲಿಸಲೇಬೇಕು. ಪೊಲೀಸ್ ಇಲಾಖೆಯಲ್ಲಿರೋ ಮುಸ್ಲಿಂರು ಕ್ಯಾಪ್ ಧರಿಸೋದಿಲ್ಲ. ಟೋಪಿ ಹಾಕ್ತೀವಿ ಅಂದ್ರೆ ಹೇಗೆ ನಡೆಯೋದಿಲ್ಲವೋ. ಅದೇ ರೀತಿನೇ ಸಮವಸ್ತ್ರ ಧರಿಸೋದನ್ನ ಎಲ್ಲರೂ ಪಾಲಿಸಲೇಬೇಕು ಅಂತಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

Edited By :
PublicNext

PublicNext

06/02/2022 05:16 pm

Cinque Terre

73.27 K

Cinque Terre

52

ಸಂಬಂಧಿತ ಸುದ್ದಿ