ಲಕ್ನೋ: ಎಐಎಂಐಎಂ ನಾಯಕ ಸಾದುದ್ದೀನ್ ಓವೈಸಿ ಅವರು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾಲ್ವರು ಹಿಂದೂಗಳಿಗೆ ತಮ್ಮ ಪಕ್ಷದ ಟಿಕೆಟ್ ನೀಡಿದ್ದಾರೆ.
ಉತ್ತರ ಪ್ರದೇಶದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಪೈಕಿ ಓವೈಸಿ ನೇತೃತ್ವದ ಪಕ್ಷವು ಒಟ್ಟು 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದರಲ್ಲಿ ನಾಲ್ವರು ಹಿಂದೂಗಳಿಗೆ ಟಿಕೆಟ್ ನೀಡಿರುವುದು ವಿಶೇಷವಾಗಿದೆ. ಘಾಜಿಯಾಬಾದ್‍ನ ಸಾಹಿಬಾಬಾದ್ ಕ್ಷೇತ್ರದಿಂದ ಪಂಡಿತ್ ಮನಮೋಹನ್ ಝಾ, ಬುಧಾನಾ ಕ್ಷೇತ್ರದಿಂದ ಭೀಮ್ ಸಿಂಗ್ ಬಲ್ಯಾನ್, ಮೀರತ್‍ನ ಹಸ್ತಿನಾಪುರ ಕ್ಷೇತ್ರದಿಂದ ವಿನೋದ್ ಜಾತವ್ ಮತ್ತು ಬಾರಾಬಂಕಿಯ ರಾಮನಗರದಿಂದ ವಿಕಾಸ್ ಶ್ರೀವಾಸ್ತವ ಸ್ಪರ್ಧಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಎಐಎಂನ ರಾಜ್ಯಾಧ್ಯಕ್ಷ ಶೌಕತ್ ಅಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರಿಗೆ ಟಿಕೆಟ್ ನೀಡುತ್ತೇವೆ. ನಾವು ಧರ್ಮದ ಆಧಾರದಲ್ಲಿ ಟಿಕೆಟ್ ನೀಡಲ್ಲ. ಆದರೂ ನಮ್ಮನ್ನು ಕೋಮುವಾದಿಗಳು ಬಣ್ಣಿಸಲಾಗುತ್ತಿದೆ. ಆದರೆ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
PublicNext
27/01/2022 12:36 pm