ಲಖನೌ(ಉತ್ತರ ಪ್ರದೇಶ): ಗೋರಖಪುರ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲು ನಾನು ತಯಾರಿದ್ದೇನೆ ಎಂದು ಮಕ್ಕಳ ವೈದ್ಯ ಡಾ. ಕಫೀಲ್ ಖಾನ್ ಹೇಳಿದ್ದಾರೆ.
ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲು ನಾನು ತಯಾರಿದ್ದೇನೆ. ಯಾವುದೇ ಪಕ್ಷ ನನಗೆ ಟಿಕೆಟ್ ನೀಡಲು ಮುಂದೆ ಬಂದರೆ ನಾನು ಚುನಾವಣೆ ಎದುರಿಸಲು ನಾನು ತಯಾರಿದ್ದೇನೆ. ಸ್ಪರ್ಧೆಗೆ ಅವಕಾಶ ನೀಡುವ ಕುರಿತು ಮಾತುಕತೆ ನಡೆದಿದೆ. ಎಲ್ಲವೂ ಸರಿಯಾಗಿ ನಡೆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಡಾ. ಕಫೀಲ್ ಖಾನ್ ಹೇಳಿದ್ದಾರೆ.
2017ರ ಆಗಸ್ಟ್‌ನಲ್ಲಿ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 80ಕುಟುಂಬಗಳ ಮಕ್ಕಳು ಸಾವನ್ನಪ್ಪಿದ ದುರಂತದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಕೂಡ ಕಫೀಲ್ ಖಾನ್ ಇದೇ ವೇಳೆ ಹೇಳಿದ್ದಾರೆ.
PublicNext
25/01/2022 10:34 pm