ಪಣಜಿ: ಗೋವಾದ ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಬಿಜೆಪಿ ತೊರೆದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಲು ಕೂಡ ನಿರ್ಧರಿಸಿದ್ದಾರೆ.
ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪಣಜಿಯಿಂದಲೇ ಸ್ಪರ್ಧಿಸಿದವ್ರು.ಅಲ್ಲಿಂದಲೇ ಒಳ್ಳೆ ಹೆಸರನ್ನೂ ಪಡೆದವರು. ಆದರೆ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಇಲ್ಲಿಂದಲೇ ಸ್ಪರ್ಧಿಸಲು ಟೆಕೆಟ್ ಕೇಳಿದರು. ಅದು ಸಿಗದೇ ಇದ್ದಾಗ ಈಗ ಬಿಜೆಪಿಯನ್ನ ತೊರೆದಿದ್ದಾರೆ ಉತ್ಪಲ್ ಪರಿಕ್ಕರ್.
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಈಗಾಗಲೇ ಉತ್ಪಲ್ ಪರಿಕ್ಕರ್‌ಗೆ ತಮ್ಮ ಪಕ್ಷ ಸೇರಲು ಆಹ್ವಾನ ನೀಡಿದ್ದರು. ಆದಾಗ್ಯೂ ಉತ್ಪಲ್ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸೋ ಸುದ್ದಿ ಈಗ ಇಲ್ಲಿ ಕೇಳಿ ಬರುತ್ತಿದೆ.
PublicNext
21/01/2022 07:53 pm