ಹೈದ್ರಾಬಾದ್: ಸರ್ಕಾರಿ ಶಾಲೆಗಳು ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಆದರೆ ಈಗ ತೆಲಂಗಾಣ ಸರ್ಕಾರ ಒಂದು ನಿರ್ಧಾರ ತೆಗೆದುಕೊಂಡಿದೆ. 2022 ಮತ್ತು 2023 ರ ಸಾಲಿನಲ್ಲಿಯೇ ಖಾಸಗಿ ಶಾಲೆಯನ್ನೂ ಮೀರಿಸೋ ಹಾಗೆ ಸರ್ಕಾರಿ ಶಾಲೆಯಲ್ಲಿಯೇ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಸಂಪುಟ ಡಿಸೈಡ್ ಮಾಡಿದೆ.
ಖಾಸಗಿ ಶಾಲೆಗಳಲ್ಲಿ ಕೇವಲ ಇಂಗ್ಲೀಷ್ ಅನ್ನೇ ಕಲಿಸುತ್ತಾರೆ.ಅದ್ದರಿಂದ ಆ ಶಾಲೆಯ ಮಕ್ಕಳು ಇಂಗ್ಲೀಷ್ ನಲ್ಲಿ ಹೆಚ್ಚು ಪರಿಣಿತಿ ಪಡೆಯುತ್ತಾರೆ. ಅದಕ್ಕೇನೇ ಈಗ ತೆಲಂಗಾಣ ಸರ್ಕಾರ, ಇಲ್ಲಿಯ ಸರ್ಕಾರಿ ಶಾಲೆಯನ್ನೆ ಇಂಗ್ಲೀಷ್ ಮೀಡಿಯಂ ಶಾಲೆ ಮಾಡಲು ಮುಂದಾಗಿದೆ. ಸಂಪುಟ ಸಭೆಯಲ್ಲೂ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದಕ್ಕಾಗಿಯೇ ಸೂಕ್ತ ಯೋಜನೆಯನ್ನೂ ಮಾಡಿದೆ. ಸರ್ಕಾರಿ ಶಾಲೆ ಶಿಕ್ಷಕರಿಗೂ ತರಬೇತಿ ಕೊಡುವ ಪ್ಲಾನ್ ಮಾಡಿದೆ. ಶಾಲೆಯನ್ನೂ ಹೈಟೆಕ್ ಮಾಡಲು ಯೋಜನೆ ಹಾಕಿದೆ.
PublicNext
19/01/2022 05:22 pm