ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿಗೆ ನೊಬೆಲ್‌ ಪ್ರಶಸ್ತಿ ಸಿಗಲಿ: ಬಿಜೆಪಿ ರಾಜ್ಯ ವಕ್ತಾರ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೊಬೆಲ್ ಪ್ರಶಸ್ತಿ ಸಲ್ಲಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ನಡೆಸಿದ ಮಾತನಾಡಿದ ಅವರು, 'ದೇಶದಲ್ಲಿ ಕೋವಿಡ್ ನಿಯಂತ್ರಣ ಹಾಗೂ ವಿಶ್ವದ 95ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸುವ ಮೂಲಕ ಪ್ರಧಾನಿ ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಲ್ಲಬೇಕು' ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ದೇಶದ ವಿಜ್ಞಾನಿಗಳು, ವೈದ್ಯರು, ಶುಶ್ರೂಷಕರು, ಉದ್ಯಮಿಗಳು, ವಾರಿಯರ್‌ಗಳು ಹೋರಾಡಿದ್ದಾರೆ. ಹೀಗಾಗಿಯೇ ಐದು ಬಲಾಢ್ಯ ದೇಶಗಳು ಮಾಡುವ ಕೆಲಸವನ್ನು ಭಾರತವೊಂದೇ ಮಾಡಿದೆ. ಲಸಿಕೆ ನೀಡಿಕೆಯಿಂದಾಗಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿದೆ. ಆಧಾರ್ ಕಾರ್ಡ್‌ ಸೇರಿದಂತೆ ಒಂದು ಗುರುತಿನ ಚೀಟಿಯೂ ಇಲ್ಲದ 67 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ’ ಎಂದರು.

Edited By : Vijay Kumar
PublicNext

PublicNext

17/01/2022 03:26 pm

Cinque Terre

34.59 K

Cinque Terre

16

ಸಂಬಂಧಿತ ಸುದ್ದಿ