ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣದ ಮನಿಕೆ ಮಗೇ ರೀತೆ ಹಾಡಿನ ಮೂಲಕ ಯುಪಿ ಸಿಎಂ ಆದಿತ್ಯನಾಥ್ ಗುಣಗಾನ

ಉತ್ತರಪ್ರದೇಶ: ಉತ್ತರ ಪ್ರದೇಶದಲ್ಲಿ ಈಗ ಏನ್ ಆಗುತ್ತಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಇಲ್ಲಿ ಏನೆಲ್ಲ ಮಾಡಿದೆ. ಇದನ್ನ ಹೇಳೋಕೇನೆ ಈಗ ಇಲ್ಲೊಂದು ಹಾಡು ರೆಡಿ ಆಗಿಬಿಟ್ಟಿದೆ. ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡೇ ಈ ಒಂದು ಹಾಡು ರೆಡಿ ಆಗಿದೆ. ವಿಶೇಷ ಅಂದ್ರೆ ಇದು ದಕ್ಷಿಣ ಭಾರತದ ವೈರಲ್ ಸಿಂಗರ್ ಯೋಹಾನಿ ಹಾಡೇ ಆಗಿದೆ. ಬನ್ನಿ, ಹೇಳುತ್ತೇವೆ.

ಉತ್ತರ ಪ್ರದೇಶದಲ್ಲಿ ಈಗ ವಿಧಾನಸಭಾ ಚುನಾವಣೆ ರಂಗು ಮತ್ತು ಗಂಗು ಎರಡೂ ಇದೆ. ಆಯಾ ಪಕ್ಷಗಳು ತಮ್ಮ ತಮ್ಮ ಅಜೆಂಡಾಗಳನ್ನ ಇಲ್ಲಿಯ ಜನಕ್ಕೆ ಹೇಳ್ತಾನೆ ಇದ್ದಾರೆ.

ಆದರೆ,ಬಿಜೆಪಿ ಸರ್ಕಾರದ ಪ್ರಚಾರ ಇಲ್ಲಿ ಬೇರೆನೆ ಇದೆ. ಯೋಗಿ ಆದಿತ್ಯನಾಥ್ ಇಲ್ಲಿವರೆಗೂ ಮಾಡಿರೋ ಕೆಲಸವನ್ನ ಹಾಡಿನ ಮೂಲಕವೇ ಇಲ್ಲಿ ಹೇಳಲಾಗುತ್ತಿದೆ.ದಕ್ಷಿಣದ ಗಾಯಕಿ ಯೋಹಾನಿ ಹಾಡಿರೋ 'ಮನಿಕೆ ಮಗೆ ರೀತೆ' ಹಾಡನ್ನ ಇಲ್ಲಿ ಪ್ರಚಾರಕ್ಕೆ ಬಳಸಲಾಗಿದೆ. ಯೋಗಿ ಆದಿತ್ಯಾನಾಥ್ ಸರ್ಕಾರ ಮಾಡಿರೋ ಕೆಲಸದ ಚಿತ್ರಣವನ್ನ ಈ ಹಾಡಿನ ಮೂಲಕವೇ ಹೇಳಾಗಿದೆ.

ಹರಿಶ್ ಗೋಯೆಂಕಾ ಅನ್ನೋರು ಈ ವೀಡಿಯೋವನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಯುಪಿಯಲ್ಲಿ ಈಗ ಏನ್ ಆಗುತ್ತಿದೆ ಅಂತಲೂ ಪ್ರಶ್ನಿಸಿದ್ದಾರೆ. ನನ್ನ ನೆಚ್ಚಿನ ಟ್ಯೂನ್ ಇದಾಗಿದೆ. ಇದನ್ನ ಹೀಗೆಲ್ಲ ಬಳಸಿದ್ದಾರೆ ಅಂತಲೂ ಬೇಸರಪಟ್ಟಿದ್ದಾರೆ.

Edited By :
PublicNext

PublicNext

16/01/2022 07:33 pm

Cinque Terre

181.17 K

Cinque Terre

23

ಸಂಬಂಧಿತ ಸುದ್ದಿ