ರಾಮನಗರ: ನಮ್ಮ ಪಾದಯಾತ್ರೆ ಕಟ್ಟಿ ಹಾಕುವ ಶಕ್ತಿ ಸರ್ಕಾರಕ್ಕೆ ಇಲ್ಲ. ಜನರ ಆರೋಗ್ಯ ದೃಷ್ಟಿ, ಬೆಂಗಳೂರಿನಲ್ಲಿ ಕೇಸ್ ಹೆಚ್ಚಳ ವಾಗುತ್ತಿರುವ ಕಾರಣ ಪಾದಯಾತ್ರೆ ರದ್ದು ಮಾಡಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ರಾಮನಗರದಲ್ಲಿ ಜೊತೆ ಮಾತನಾಡಿದ ಅವರು, ಕೋವಿಡ್ ಹೆಚ್ಚಳವಾಗಿದ್ದನ್ನು ನೋಡಿ ನಮ್ಮ ಮೇಲೆ ಕೇಸ್ ಹಾಕಲು ಸರ್ಕಾರ ಪ್ಲ್ಯಾನ್ ಮಾಡಿತ್ತು. ಸರ್ಕಾರದ ವೈಫಲ್ಯದಿಂದ ಕೋವಿಡ್ ಹೆಚ್ಚಾಗಿದೆ. ಇದನ್ನು ಪಾದಯಾತ್ರೆ ಮೇಲೆ ಹಾಕುವ ಯತ್ನ ನಡೆದಿದೆ. ಈ ಕಾರಣ ಪಾದಯಾತ್ರೆ ರದ್ದು ಮಾಡುತ್ತಿದ್ದೇವೆ. ಇದು ಕೊನೆಯಲ್ಲ, ಆರಂಭ ಎಂದರು. ಸರ್ಕಾರ ನಮ್ಮನ್ನು ಬಂಧಿಸುತ್ತದೆ ಎಂದು ಹೆದರಿ ಪಾದಯಾತ್ರೆ ರದ್ದು ಮಾಡುತ್ತಿಲ್ಲ. ಸರ್ಕಾರಕ್ಕೆ ಆ ಶಕ್ತಿಯೂ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ಡಿ.ಕೆ.ಸುರೇಶ್ ಸವಾಲೆಸೆದರು.
PublicNext
13/01/2022 10:33 pm