ರಾಮನಗರ: ಮೇಕೆದಾಟು ಯೋಜನೆಗಾಗಿ ಒತ್ತಾಯಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ. ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಲವು ಯಡವಟ್ಟುಗಳಿಗೆ ಕಾರಣವಾಗುತ್ತಿದ್ದಾರೆ.
ಈ ನಡುವೆ ವಿರಾಮ ಪಡೆಯುವಾಗ ಡಿಕೆಶಿ ಸುತ್ತ ನೂರಾರು ಜನ ಸೇರಿದ್ದಾರೆ. ಅಲ್ಲಿಗೆ ಮೌಲ್ವಿಗಳು ಬಂದು ಡಿಕೆಶಿ ಪರವಾಗಿ ನಮಾಜ್ ಮಾಡಿದ್ದಾರೆ. ಇದರ ವಿಡಿಯೋ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಇಲ್ಲಿ ಯಾರು ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ? ಎಂದು ಪ್ರಶ್ನಿಸಿದೆ. ಹಾಗೂ #ತಬ್ಲಿಘಿಕಾಂಗ್ರೆಸ್ #ಕೋವಿಡ್‌ಯಾತ್ರೆ ಎಂದು ಹ್ಯಾಷ್ ಟ್ಯಾಗ್ ಮಾಡಿದೆ.
ಇನ್ನು ಬಿಜೆಪಿ ಮಾಡಿರುವ ಟ್ವೀಟ್ ಹೀಗಿದೆ- 'ಇಲ್ಲಿ ಯಾರು ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ? ಡಿಕೆಶಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದ ಸಾಮಾಜಿಕ ಅಂತರ, ಮಾಸ್ಕ್ ಎಲ್ಲಿದೆ? ಕೋವಿಡ್ ಮೊದಲನೇ ಅಲೆ ಹಾಗೂ ಮೂರನೇ ಅಲೆಯ ವಿಸ್ತಾರಕರು ಒಂದೇ ಫ್ರೇಮ್‌ನಲ್ಲಿದ್ದಾರೆ!'
PublicNext
11/01/2022 10:09 pm