ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸುಮೋಟೋ ಕೇಸ್ ದಾಖಲಿಸಿದೆ.
ಮೇಕೆದಾಟು ಪಾದಯಾತ್ರೆ ವೇಳೆ ನಿನ್ನೆ ವಿಶ್ವೋದಯ ಶಾಲೆಗೆ ಭೇಟಿ ನೀಡಿ ಕೋವಿಡ್ ರೂಲ್ಸ್ ಪಾಲಿಸದೇ ಮಕ್ಕಳ ಜೊತೆ ಡಿಕೆ ಶಿವಕುಮಾರ್ ಬೆರೆತಿದ್ದರಿಂದ ಆಯೋಗವು ಸುಮೋಟೋ ಕೇಸ್ ದಾಖಲಿಸಿದೆ. ಜೊತೆಗೆ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯ ಡಿಜಿ-ಐಜಿಪಿ ಪ್ರವೀಣ್ ಸೂದ್ಗೆ ಪತ್ರ ಬರೆದಿರುವ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಈ ಬಗ್ಗೆ ವಿಚಾರಣೆ ನಡೆಸಿ 1 ವಾರದಲ್ಲಿ ವರದಿ ನೀಡುವಂತೆ ಸೂಚಿಸಿದೆ.
PublicNext
11/01/2022 07:58 am