ಪಂಜಾಬ್:ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್‌ಗೆ ಭೇಟಿಕೊಟ್ಟಿದ್ದರು.ಇದೇ ವೇಳೆ ಪ್ರಧಾನಿ ಮೋದಿ ಭದ್ರತೆಯಲ್ಲಿ ಮಹಾ ಲೋಪವಾಗಿಯೇ ಇದೆ. ಫಿರೋಜ್‌ಫುರ್‌ನ ಫ್ಲೈಓವರ್ ಮೇಲೆ ಸಿಲುಕಿದ್ದ ಪ್ರಧಾನಿ ಮೋದಿ ಬರೋಬ್ಬರಿ 15-ರಿಂದ 20 ನಿಮಿಷ ಸಿಲುಕಿಕೊಂಡಿದ್ದರು. ಆದರೆ ಪಂಜಾಬ್ ಪೊಲೀಸರು ಭದ್ರತೆ ಒದಗಿಸಿದ ಬಳಿಕವೇ ಮೋದಿ ಪ್ರಯಾಣ ಮುಂದುವರೆಸಿದರು.
ಭದ್ರತಾ ಲೋಪವಾದ ಹಿನ್ನೆಲೆಯಲ್ಲಿಯೇ ಇಂದು ಪಂಜಾಬ್ ನಲ್ಲಿ ನಡೆಯಬೇಕಿದ್ದ ಮೋದಿ ರ್ಯಾಲಿ ಕೂಡ ರದ್ದು ಆಗಿದೆ.ಧರಣಿ ನಿರತರು ರಸ್ತೆ ಬ್ಲಾಕ್ ಮಾಡಿದ್ದ ಹಿನ್ನೆಲೆಯಲ್ಲಿಯೇ ರಸ್ತೆ ಜಾಮ್ ಆಗಿತ್ತು. ಇದರಿಂದ ಪ್ರಧಾನಿ ಬೆಂಗಾವಲು ಪಡೆಯನ್ನ ಫಿರೋಜ್‌ಫುರ್ ಫ್ಲೈಓವರ್‌ನಲ್ಲಿಯೇ 15-ರಿಂದ 20 ನಿಮಿಷ ಸಿಲುಕಿಕೊಂಡಿತ್ತು.
ಭದ್ರತೆಯಲ್ಲಿ ಲೋಪದ ಬಗ್ಗೆ ವರದಿಕೊಡುವಂತೆ ಪಂಜಾಬ್ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಸೂಚಿಸಿದೆ.ಈ ಬಗ್ಗೆ ಸಿಎಂ ಚೆನ್ನಿಗೆ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಹೇಳಿದ್ದಾರೆ.
PublicNext
05/01/2022 03:28 pm