ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿಗೆ ಆಡಳಿತದ ಮೇಲೆ ಹಿಡಿತ ಇದೆ:ಶರದ್ ಪವಾರ್

ಪುಣೆ:ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಬಹುವಾಗಿ ಮೆಚ್ಚಿಕೊಂಡು ಹೊಗಳಿದ್ದಾರೆ.

ಪುಣೆಯಲ್ಲಿ ಮರಾಠಿ ದೈನಿಕ 'ಲೋಕಸತ್ತಾ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಮಾತನಾಡಿದ್ದಾರೆ.ಮೋದಿ ಮನೋಧರ್ಮ ವಿಶೇಷವಾಗಿಯೇ ಇದೆ. ಒಮ್ಮೆ ಮೋದಿ ಯಾವುದೇ ಕೆಲಸ ಕೈಗೆತ್ತಿಕೊಂಡರೇ ಮುಗಿಯಿತು. ಅದು ಕಂಡಿತಾ ಪೂರ್ಣಗೊಳ್ಳುತ್ತಿದೆ ಅಂತಲೇ ಹೇಳಿದ್ದಾರೆ ಶರದ್ ಪವಾರ್.

ಮೋದಿ ಅವರಿಗೆ ಆಡಳಿತದ ಮೇಲೆ ಹಿಡಿತ ಇದೆ. ಅದು ಅವರ ಶಕ್ತಿನೇ ಆಗಿದೆ. ಸರ್ಕಾರದ ನೀತಿಗಳನ್ನ ಅನುಷ್ಠಾನಕ್ಕೆ ತರುವಲ್ಲಿ ಮೋದಿ ಅತಿ ಹೆಚ್ಚು ಗಮನ ಹರೆಸುತ್ತಾರೆ ಅಂತಲೇ ಮೋದಿಯನ್ನ ವರ್ಣಿಸಿದ್ದಾರೆ ಶರದ್ ಪವಾರ್.

Edited By :
PublicNext

PublicNext

30/12/2021 03:16 pm

Cinque Terre

94.85 K

Cinque Terre

6

ಸಂಬಂಧಿತ ಸುದ್ದಿ