ಹುಬ್ಬಳ್ಳಿ: ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು. ಇಲ್ಲಿ ನಾಯಕತ್ವ ಶಾಶ್ವತವಲ್ಲ. ಅಲ್ಲದೆ ಯಾವುದೇ ಅಶಿಸ್ತನ್ನು ಪಕ್ಷ ಸಹಿಸುವುದಿಲ್ಲ. ಯಾವುದೇ ಕಾರ್ಯಕರ್ತರು ಅಶಿಸ್ತು ತೋರಿದರು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂಬುವಂತ ಸಂದೇಶವನ್ನು ಈ ಕಾರ್ಯಕಾರಣಿ ರವಾನೆ ಮಾಡಲಿದೆ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದೆ. ಹಿಂದು ಧರ್ಮವನ್ನು ಪುನಶ್ಚೇತನ ಮಾಡಿದೆ. ಕಾಶಿಯನ್ನು ದಿವ್ಯಕಾಶಿ ಭವ್ಯಕಾಶಿಯನ್ನಾಗಿ ಮಾಡಿದೆ. ಆಧ್ಯಾತ್ಮ ಧರ್ಮ ಮಾತ್ರವಲ್ಲದೆ, ರಾಮ ಮಂದಿರದ ಜೊತೆಗೆ ದೇಶ ಮಂದಿರವನ್ನು ಕಟ್ಟುತ್ತೇವೆ. ಆತ್ಮನಿರ್ಭರತೆಯು ಎಲ್ಲ ರಂಗದಲ್ಲಿಯೂ ಕಾಣಬೇಕು ಎಂಬುವಂತ ಮಹತ್ವದ ಕನಸು ಮೋದಿಯವರದಾಗಿದೆ ಎಂದರು.
ರಾಜಕೀಯ ಸವಾಲು ಕುರಿತು ಚರ್ಚೆಯಾಗಿದೆ. ಸೈದ್ದಾಂತಿಕ ನೆಲೆಕಟ್ಟನ್ನು ಗಟ್ಟಿಗೊಳಿಸುವ ಕಾರ್ಯವನ್ನು ಕಾರ್ಯಕಾರಣಿ ಮಾಡಿದೆ. ರಾಜಕೀಯ ಬದ್ಧತೆ ಮತ್ತು ಸಿದ್ಧಾಂತಕ್ಕೆ ಎಲ್ಲರೂ ಬೆಲೆ ಕೊಡಬೇಕು. ಮೈಕ್ರೋಸ್ಕೋಪ್ ಕಮೀಟಿಯವರಿಗೂ ಕೂಡ ಸ್ಥಾನಮಾನ ಕೊಡಬೇಕು ಎಂಬುದನ್ನು ಚರ್ಚಿಸಲಾಯಿತು. ಜಪಾನ್ ಹಾಗೂ ಇಸ್ರೇಲ್ ಮಾದರಿಯ ಪ್ರೋ ಆ್ಯಕ್ಟಿವ್ ಜರ್ನಲಿಸಮ್ ಮೂಲಕ ದೇಶವನ್ನು ಕಟ್ಟುವ ಕಾರ್ಯವಾಗಬೇಕಿದೆ ಎಂದು ಅವರು ಹೇಳಿದರು.
ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಇಂಧನ ಬೆಲೆ ಏರಿಕೆ ನೂರು ವರ್ಷಗಳಲ್ಲಿ ಒಮ್ಮೆ ಕೋವಿಡ್ ಅಂತಹ ಸವಾಲುಗಳು ಬರುತ್ತವೆ. ನಿರ್ವಹಣೆ ಹಿನ್ನಲೆಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ತತ್ತಕ್ಷಣವೇ ಸಾಂಕ್ರಾಮಿಕ ನಮ್ಮ ಎದುರಿಗೆ ಬಂದಿದೆ. ನಾವು 17 ರೂಪಾಯಿ ಕಡಿಮೆ ಮಾಡಿದ್ದೇವೆ ಎಂದರು.
ಕೃಷಿ ಕಾಯಿದೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಅಧಿವೇಶನದ ಒಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಗೆಜೆಟ್ ಆದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೇಂದ್ರದಲ್ಲಿ ಆಗಿರುವ ಬಗ್ಗೆ ರಾಜ್ಯದಲ್ಲಿ ಕೂಡ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು
PublicNext
29/12/2021 01:10 pm