ಮಂಡ್ಯ: ಮತಾಂತರ ನಿಷೇಧ ಮಸೂದೆ ತರದೇ ಇದ್ದಿದ್ರೆ ಕರ್ನಾಟಕ ಮುಳುಗೋಗ್ತಿತ್ತಾ.? ಜನ ಸತ್ತು ಹೋಗ್ತಿದ್ದರಾ? ಏನು ಅರ್ಜೆಂಟ್ ಇತ್ತು ಮತಾಂತರ ಮಸೂದೆ ಜಾರಿಗೆ ತರಲು? ಎಲ್ಲಾ ಧರ್ಮ, ಜಾತಿಯವರನ್ನು ಒಂದುಗೂಡಿಸುವ ಕೆಲಸ ಮಾಡುವ ಬದಲಾಗಿ ಜನರ ಭಾವನೆ ಕೆರಳಿಸುವ ಕೆಲಸ ಮಾಡ್ತಿದ್ದೀರಾ.?
ಹೀಗಂತ ಮಾಜಿ ಸಚಿವ ಜಿ. ಪರಮೇಶ್ವರ್, ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಶಿವಪುರದ ಸತ್ಯಾಗ್ರಹ ಸೌಧದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದಂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ , ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕಾಗಿ ಹಿಂದೂಗಳನ್ನು ಒಗ್ಗೂಡಿಸಬೇಕು. ಮುಸ್ಲಿಂರನ್ನು, ಕ್ರಿಶ್ಚಿಯನ್‌ರನ್ನು ಬೇರೆ ಧರ್ಮದವರನ್ನು ಬೇರೆ ಮಾಡಬೇಕು. ಈ ಕಾರಣಕ್ಕಾಗಿ ಬಿಜೆಪಿ ಅವರು ಮತಾಂತರ ಕಾಯ್ದೆ ತಂದಿದ್ದಾರೆ ಎಂಬುದಾಗಿ ಕಿಡಿ ಕಾರಿದರು.
PublicNext
28/12/2021 08:49 pm