ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೇಜಸ್ವಿ ಸೂರ್ಯನ ತಲೆಯಲ್ಲಿ ಮೆದುಳೇ ಇಲ್ಲ: ನಟಿ ರಮ್ಯಾ ಸಿಡಿಮಿಡಿ

ಬೆಂಗಳೂರು: ಮತಾಂತರವಾಗಿ ಪಾಕಿಸ್ತಾನಕ್ಕೆ ತೆರಳಿದ ಎಲ್ಲರನ್ನೂ ವಾಪಸ್ ಹಿಂದೂ ಧರ್ಮಕ್ಕೆ ಕರೆತರಬೇಕಿದೆ ಎಂದು ಸಂಸದ ತೇಜಸ್ವಿ ಸೂರ್ಯ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿರುವ ನಟಿ ರಮ್ಯಾ, ತೇಜಸ್ವಿ ಸೂರ್ಯನ ತಲೆಯಲ್ಲಿ ಮೆದುಳೇ ಇಲ್ಲ ಎಂದು ಸಿಡಿಮಿಡಿಗೊಡಿದ್ದಾರೆ.

ಇನ್‌ಸ್ಟಾ ಸ್ಟೋರಿಯಲ್ಲಿ ತೇಜಸ್ವಿ ಸೂರ್ಯ ಅವರ ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಶೇರ್ ಮಾಡಿಕೊಂಡ ರಮ್ಯಾ, ಈ ಮನುಷ್ಯನ ಬುರುಡೆಯಲ್ಲಿ ಮೆದುಳು ಇಲ್ಲ ಎಂದು ಬರೆದಿದ್ದಾರೆ.

ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೇ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರನ್ನು ಕೂಡ ಘರ್ ವಾಪಸಿ ಮಾಡಬೇಕು ಎಂದು ಹೇಳಿದ್ದರು.

Edited By : Nagaraj Tulugeri
PublicNext

PublicNext

28/12/2021 06:38 pm

Cinque Terre

42.12 K

Cinque Terre

14

ಸಂಬಂಧಿತ ಸುದ್ದಿ