ಭೂಪಾಲ್:ಪ್ರಧಾನಿ ನರೇಂದ್ರ ಮೋದಿ ಅವರಿಂದ ಜೀನ್ಸ್ ತೊಟ್ಟ ಮತ್ತು ಮೊಬೈಲ್ ಬಳಸುವ ಹುಡುಗಿಯರು ಪ್ರಭಾವಿತರಾಗಿಲ್ಲ. ಬದಲಾಗಿ 40 ರಿಂದ 50 ವರ್ಷದ ಮಹಿಳೆಯರೇ ಅತಿ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭೂಪಾಲ್ ನ ತುಳಸಿ ನಗರದ ನರ್ಮದಾ ಮಂದಿರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೀಗೆ ಮೋದಿ ಬಗ್ಗೆ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಮೋದಿ ಮಾತುಗಳು ಅತಿ ಹೆಚ್ಚು ಇಷ್ಟ ಆಗಿರೊದೇ 40 ರಿಂದ 50 ವರ್ಷದ ಮಹಿಳೆಯರೇ ಆದರೆ ಜೀನ್ಸ್ ತೊಟ್ಟ ಹುಡುಗಿಯರ ಮೇಲೆ ಮೋದಿ ಪ್ರಭಾವ ಅಷ್ಟೇನೂ ಬೀರಲಿಲ್ಲ ಅಂತಲೇ ವಿವರಿಸಿದ್ದಾರೆ ದಿಗ್ವಿಜಯ್ ಸಿಂಗ್. ಈ ಮಾತೇ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
27/12/2021 07:29 am