ಹುಬ್ಬಳ್ಳಿ: ಮರಾಠಿ ಮತ್ತು ಕನ್ನಡಿಗರ ನಡುವೆ ಉತ್ತಮ ಸುಮಧುರ ಬಾಂಧ್ಯವ್ಯ ಇದೆ. ಘಟನೆಗೆ ಎಲ್ಲ ಎಂ ಇ ಎಸ್ ಅಂತಲೂ ಹೇಳುವುದಿಲ್ಲ. ಮರಾಠಿಗರ ಹೆಸರಿನಲ್ಲಿ ಈ ರೀತಿ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲರೂ ಚೆನ್ನಾಗಿ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಕನ್ನಡಿಗರು ಮತ್ತು ಮರಾಠಿಗರು ಇಲ್ಲಿ ಎಲ್ಲರೂ ಒಂದಾಗಿದ್ದೇವೆ. ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದರು. ಸಿಎಂ ಉದ್ಧವ್ ಠಾಕ್ರೆ, ಶರತ್ ಪವಾರ್ ಇದನ್ನ ಗಮನಿಸಬೇಕು.
ಇನ್ನು ಬೆಳಗಾವಿ ಸಮಗ್ರ ಕರ್ನಾಟಕದ್ದು, ಅಲ್ಲಿರುವ ಕನ್ನಡಿಗರಿಗೆ ಅವರು ರಕ್ಷಣೆ ಕೊಡಬೇಕು. ಇಲ್ಲಿರುವ ಮರಾಠಿಗರಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ ಎಂದರು. ಇನ್ನು ಕರ್ನಾಟಕ ಬಂದ್ ಕುರಿತು ಮಾತಾನಾಡಿದ ಅವರು, ಬಂದ್ ಮಾಡುವ ಅಗತ್ಯ ಇಲ್ಲ. ನಾವು ನಮ್ಮ ರಾಜ್ಯವನ್ನ ಬಂದ್ ಮಾಡೋ ಅವಶ್ಯಕತೆ ಏನ ಇದೆ.
ಬಂದ್ ಕರೆ ಕೊಟ್ಟವರಿಗೆ ನನ್ನ ಒತ್ತಾಯ ಏನಂದ್ರೆ, ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ, ಕೊರೊನಾ ಸಮಯದಲ್ಲಿ ಬಹಳ ಕಷ್ಟ ಆಗಿದೆ. ಸಮಾಜ ವಿದ್ರೋಹಿ ಚಟುವಟಿಕೆ ಮಾಡಿದ್ದಾರೆ ಅವರಿಗೆ ಕಠಿಣ ಕ್ರಮಕ್ಕೆ ಆಗೆ ಆಗುತ್ತೆ ಎಂದು ಜೋಶಿ ಹೇಳಿದರು.
PublicNext
25/12/2021 11:56 am