ಬೆಳಗಾವಿ: ಬೆಂಗಳೂರಿನ ಬಿಎಂಟಿಸಿ ಸಾಲದಲ್ಲಿಯ ಇದೆ. ಸಂಕಷ್ಟಗಳನ್ನೂ ಎದುರಿಸುತ್ತಿದೆ. 2017-18 ರಿಂದ 2020-2021 ರವರೆಗೂ ಬರೋಬ್ಬರಿ 733.10 ಕೋಟಿ ಸಾಲ ಪಡೆದಿದೆ ಎಂದು ಬೆಳಗಾವಿಯ ಅಧಿವೇಶನದಲ್ಲಿ ಸಮಾಜ ಕಲ್ಯಾನ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾ ಹೇಳಿದ್ದಾರೆ.
ಸದನದಲ್ಲಿ ಈ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ ಅವ್ರು,ಬಿಎಂಟಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದರೂ ಸಂಸ್ಥೆ 116.27 ಕೋಟಿ ಅಸಲು ಮತ್ತು 79.58 ಕೋಟಿ ಬಡ್ಡಿಯನ್ನೂ ಮರುಪಾವತಿಸಿದೆ ಅಂತಲೂ ವಿವರಿಸಿದರು. 2017-18- ರಿಂದ 2021 ರ ಅಧಿಯಲ್ಲಿ 9,049 ಬಸ್‌ಗಳನ್ನ ಖರೀದಿಸೋಕೆ ಸಂಸ್ಥೆ ನಿರ್ಧರಿಸಿತ್ತು.ಆದರೆ,2,057 ಬಸ್ ಗಳನ್ನ ಮಾತ್ರ ಖರೀದಿಸಲು ಸಾಧ್ಯವಾಗಿದೆ ಅಂತಲೂ ವಿವರಿಸಿದ್ದಾರೆ ಕೋಟ ಶ್ರೀನಿವಾಸ್ ಪೂಜಾರಿ.
PublicNext
25/12/2021 08:10 am