ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ವೈಜ್ಞಾನಿಕ ಆಧಾರದ ಮೇಲೆಯೇ ಮದುವೆ ವಯಸ್ಸು ಏರಿಕೆ: ಸಚಿವೆ ಶೋಭಾ ಸಮರ್ಥನೆ

ಕಾಪು: ಮದುವೆ ವಯಸ್ಸು 21 ಕ್ಕೆ ಏರಿಸಿರುವ ಕೇಂದ್ರ ಸರ್ಕಾರದ ಆದೇಶಕ್ಕೆ ಉಡುಪಿಯಲ್ಲಿ ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮದುವೆ ವಯಸ್ಸಿಗೂ, ಜನಸಂಖ್ಯೆಗೂ ಸಂಬಂಧ ಇಲ್ಲ.ವಯಸ್ಸು 21 ಆದರೆ ಯುವತಿಯ ಪದವಿ ಆಗಿರುತ್ತದೆ.

ಯುವತಿಗೆ 21 ವಯಸ್ಸಿಗೆ ಪ್ರಭುದ್ಧತೆ ಬಂದಿರುತ್ತದೆ. 22 ಆಗುವ ಮೊದಲು ಯಾರೂ ಮದುವೆ ಮಾಡಬಾರದು.ಇಡೀ ದೇಶದಲ್ಲಿ ಹದಿನೆಂಟನೇ ವಯಸ್ಸಿಗೆ ಮದುವೆ ಮಾಡುತ್ತಾರೆ ಎಂಬ ಅಭಿಪ್ರಾಯ ತಪ್ಪು.ಸ್ವರ್ಣವಲ್ಲಿ ಸ್ವಾಮಿಜಿ ಮಾತಿಗೆ ನಾನು ವಿರೋಧ ಮಾಡಲ್ಲ.ವಯಸ್ಸು 21 ಆದ ನಂತರ ಮಹಿಳೆಯರು ಹೆರುತ್ತಾರೆ.ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತದೆ.ಕಾನೂನು ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ,ಈ ಕಾನೂನನ್ನು ದೇಶದ ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಗರ್ಭಪಾತ ಆಗಬಹುದು,ಮಕ್ಕಳ, ಬಾಣಂತಿಯ ಮರಣ ಸಾವುಗಳುಸಂಭವಿಸಬಹುದು.ಇವನ್ನೆಲ್ಲ ಗಣನೆಗೆ ತೆಗೆದುಕೊಂಡು ಈ ಕಾಯಿದೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

23/12/2021 03:15 pm

Cinque Terre

61.47 K

Cinque Terre

12

ಸಂಬಂಧಿತ ಸುದ್ದಿ