ಕಾಪು: ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂದಿರುವ ಡಿ.ಕೆ.ಶಿವಕುಮಾರ್ ಗೆ ಉಡುಪಿಯ ಕಾಪುವಿನಲ್ಲಿ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.ಡಿ.ಕೆ ಶಿವಕುಮಾರ್ ಎಲ್ಲ ಕಾಯ್ದೆಗಳನ್ನೂ ಹಿಂದಕ್ಕೆ ತೆಗೆಯುತ್ತೇವೆ ಎಂದು ಹೇಳಿದ್ದಾರೆ.ಕಾಶ್ಮೀರದ 370ನೇ ವಿಧಿ, ಸಿಎಎ ಕಾಯ್ದೆ ,ಗೋಹತ್ಯಾ ನಿಷೇಧ ಕಾಯ್ದೆ ಮತಾಂತರ ನಿಷೇಧ ಕಾಯ್ದೆ ಹೀಗೆ ಎಲ್ಲವನ್ನೂ ವಾಪಸ್ ತಗೋತೀವಿ ಎಂದು ಹೇಳಿದ್ದಾರೆ.
ಡಿಕೆಶಿ ಮತ್ತು ಕಾಂಗ್ರೆಸ್ ಎಲ್ಲ ಕಾಯ್ದೆಗಳನ್ನೂ ತೆಗೆಯುವುದರಲ್ಲೇ ಇದೆ.ಜಾತಿವಾದ,ಧರ್ಮವಾದ ಮಾಡಿದ್ದು ಕಾಂಗ್ರೆಸ್.ಕಾಶ್ಮೀರದಲ್ಲಿ ಬೆಂಕಿ ಹಚ್ಚಲು ಕಾರಣಕರ್ತರಾದವರು ಕಾಂಗ್ರೆಸ್ಸಿಗರೇ.ಆದರೆ ಅವರಿಗೆ ಕಾಯ್ದೆಗಳನ್ನು ತೆಗೆಯುವ ಅವಕಾಶ ರಾಜ್ಯದ ಜನತೆ ಕೊಡಲ್ಲ.ಕಾಂಗ್ರೆಸ್ಸನ್ನು ಎಲ್ಲಿಡಬೇಕೋ ಜನ ಅಲ್ಲೇ ಇಟ್ಟಿದ್ದಾರೆ,ಕಾಂಗ್ರೆಸ್ ಇನ್ನಷ್ಟು ಹೀನ ಸ್ಥಿತಿಗೆ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
23/12/2021 02:50 pm