ಬೆಳಗಾವಿ: ಸುವರ್ಣಸೌಧದಲ್ಲಿ ಆರಂಭವಾದ ಅಧಿವೇಶನದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವರ ಜವಾಬ್ದಾರಿಯನ್ನು ಮತ್ತೊಂಮ್ಮೆ ನೆನಪಿಸಿದ್ದಾರೆ.
ಅಧಿವೇಶನ ಆರಂಭವಾದಾಗಿನಿಂದ ಬರೀ ಅನಾವಶ್ಯಕ ಚರ್ಚೆಗಳು ಹೆಚ್ಚು ನಡೆಯುತ್ತಿವೆ ಇವುಗಳಿಗೆ ಬ್ರೇಕ್ ಹಾಕಿ. ಯಾವುದು ಮುಖ್ಯ ವಿಚಾರವೊ ಅಂತಹದಕ್ಕೆ ಚರ್ಚೆ ಮಾಡಲು ಅವಕಾಶ ನೀಡಿ. ಅನಾವಶ್ಯಕವಾಗಿ ಉಪಯೋಗವಿಲ್ಲದ ವಿಷಯದ ಮೇಲೆ 7 ರಿಂದ 8 ಜನ ಮಾತನಾಡಲು ಅವಕಾಶ ನೀಡಬೇಡಿ.
ಅಂತಹವರಿಗೆ ಅವಕಾಶ ಕೊಡದಿರುವ ಅಧಿಕಾರ ನಿಮ್ಮ ಕೈಯಲ್ಲಿದೆ. ಅದನ್ನು ಬಳಸಿ ಸೂಕ್ತ ಚರ್ಚೆಗೆ ಮುಕ್ತ ಅವಕಾಶ ಕಲ್ಪಿಸಿ ಎಂದು ತಿಳಿಹೇಳಿದ್ದಾರೆ. ಅಧಿವೇಶನ ಮುಗಿಯುತ್ತಾ ಬಂದರು ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗುತ್ತಿಲ್ಲ.
PublicNext
22/12/2021 10:48 pm