ಚಿಕ್ಕಮಗಳೂರು : 4 ಬಾರಿ ಶಾಸಕರಾಗಿ, 2 ಬಾರಿ ಮಂತ್ರಿಗಳಾದ್ರೂ ಅಭಿವೃದ್ಧಿ ಕೆಲಸಗಳನ್ನು ಸಿ ಟಿ ರವಿ ಮಾಡಿಲ್ಲ.ಧರ್ಮ-ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ಕೊಡೊದೇ ಅವರ ಕಾಯಕ ಎಂದು ನಗರದಲ್ಲಿ
ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.
ಸಿ.ಟಿ ರವಿ ಒಬ್ಬ ವಿಕೃತ ಮನಸ್ಸುಳ್ಳ ಮನುಷ್ಯ,ಇವರು ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಹಚ್ಚುವ ಮನಸ್ಥಿತಿಯ ಪಕ್ಷ ಅಂತ ಹೇಳಿಕೆ ಕೊಟ್ಟಿದ್ದಾರೆ. ನಿಮಗೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
ಬಿಜೆಪಿ ಅಂದ್ರೆ ಬೆಂಕಿ ಹಚ್ಚುವ ಜನರ ಪಕ್ಷ ಅಂತ ಹೇಳಬೇಕಾಗುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿ 4 ತಿಂಗಳ ಒಳಗೆ 43 ಕೇಸ್ ವಾಪಸ್ ಪಡೆದಿದ್ದರು 43 ಕೇಸಲ್ಲಿ ಮೊದಲನೇ ಪ್ರಕರಣವೇ ಸಿಟಿ ರವಿ ಅವರದ್ದಾಗಿತ್ತು. ನಿಮ್ಮ ಮನೆಯಲ್ಲಿ ವಾತಾವರಣ ಕೊಳೆತು ನಾರುತ್ತಿದೆ,
ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಖಡಕ್ ಆಗಿ ಮಾತನಾಡಿದ್ದಾರೆ.
PublicNext
22/12/2021 05:01 pm