ಬೆಳಗಾವಿ:ಅಧಿವೇಶನದಲ್ಲಿ ಮತಾಂತರ ಕಾಯ್ದೆ ಮಸೂದೆ ಮಂಡನೆ ವೇಳೆ ಡಿಕೆ ಶಿವಕುಮಾರ್ ಮತಾಂತರ ನಿಷೇಧ ಮಸೂದೆಯನ್ನ ಹರಿದುಹಾಕಿದ್ದಾರೆ. ಆದರೆ ಹೊರ ಬಂದ್ಮೇಲೆ ಏನ್ ಹೇಳಿದ್ರು ಗೊತ್ತೇ . ಬನ್ನಿ, ಹೇಳ್ತೀವಿ.
ಹೌದು ಮತಾಂತರ ನಿಷೇಧ ಕಾಯ್ದೆಯನ್ನ ನಾನು ಹರಿದು ಹಾಕಿದ್ದೇನೆ. ಇದು ನನ್ನ ಹಕ್ಕು.ಯಾರು ಏನ್ ಮಾಡ್ತಾರೋ ಮಾಡಲಿ. ಆದರೆ ಸರ್ಕಾರ ಈ ವಿಚಾರದಲ್ಲಿ ಅದ್ಯಾಕೋ ಕಳ್ಳರಂತೆ ವರ್ತಿಸುತ್ತಿದೆ. ಅದಕ್ಕೂ ಹೆಚ್ಚಾಗಿ ಈ ಕಾಯ್ದೆ ಸಂವಿಧಾನದ ವಿರೋಧಿ ಕಾಯ್ದೆನೆ ಆಗಿದೆ.
ಸದನದ ಕಲಾಪ ಮುಗಿದ ಬಳಿಕ ಮಾಧ್ಯಮದವರೆ ಮುಂದೆ ಮಾತನಾಡಿದ್ದಾರೆ. ಸದನದಲ್ಲಿ ಸಮಯಾವಕಾಶ ಇತ್ತು. ಆದರೂ ಕಾಯಲೇ ಇಲ್ಲ.ಕಂದಾಯ ಸಚಿವರು ಉತ್ತರ ನೀಡುವ ಸಮಯದಲ್ಲಿಯೇ ಅವರ ಮಾತು ಮುಗಿಸಿ,ನಮ್ಮ ಸಮ್ಮುಖದಲ್ಲಿಯೇ ಮಸೂದೆ ಮಂಡನೆ ಮಾಡಬಹುದಿತ್ತು.
ನಾವೂ ಕೂಡ ಈ ಸಮಯದಲ್ಲಿಯೇ ಆಕ್ಷೇಪಿಸಲು ಸಿದ್ಧರಿದ್ದೇವು. ಸರ್ಕಾರ ಮಸೂದೆ ಮಂಡನೆ ಬಳಿಕ ಮತ ಹಾಕಲು ಅವಕಾಶ ಮಾಡಿಕೊಡಬೇಕಿತ್ತು.ಬಹುಮತದ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಆದರೆ ಸ್ಪೀಕರ್ ಪಕ್ಷದ ಸದಸ್ಯರಂತೆ ವರ್ತಿಸಿದ್ದಾರೆ. ಕಾನೂನು ರೀತಿ ನಡೆದುಕೊಂಡಿಲ್ಲ ಅಂತಲೇ ಡಿಕೆಶಿ ದೂರಿದ್ದಾರೆ.
PublicNext
22/12/2021 12:59 pm