ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣುಮಕ್ಕಳಿಗೆ ಬಾಳ ಸಂಗಾತಿ ಆಯ್ಕೆ ಹಕ್ಕು ಕೊಡಲೇಬೇಕು- ಸಂಸದ ಓವೈಸಿ

ನವದೆಹಲಿ:18 ನೇ ವಯಸ್ಸಿನಲ್ಲಿಯೇ ಪ್ರಧಾನಿಯನ್ನ ಆಯ್ಕೆ ಮಾಡುವ ಹಕ್ಕು ಹೆಣ್ಣು ಮಕ್ಕಳಿಗೆ ಇದೆ ಅಂದ್ಮೇಲೆ ಬಾಳ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕು ಅವರಿಗೆ ಯಾಕಿಲ್ಲ ಅಂತಲೇ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರವನ್ನ ಕೇಳ್ತಿದ್ದಾರೆ.

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ 18 ರಿಂದ 20 ಹೆಚ್ಚಿಸಬೇಕು ಅನ್ನೋ ಪ್ರಸ್ತಾವನೆಗೆ ಅಸ್ತು ಅಂತಲೂ ಹೇಳಿದೆ. ಈ ಹಿನ್ನೆಲೆಯಲ್ಲಿಯೇ ಓವೈಸಿ ಕೊಂಚ ಜಾಸ್ತಿನೇ ಗರಂ ಆಗಿದ್ದಾರೆ.

ಮದುವೆ ವಯಸ್ಸಿಗೆ ಇಂತಿಷ್ಟೇ ವಯಸ್ಸು ಇರಬೇಕು ಅಂತ ಹೇಳುವ ಸರ್ಕಾರ, ಬಾಳ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕು ಅವರಿಗ್ಯಾಕೆ ಇಲ್ಲ ಅನ್ನೋದನ್ನ ನೇರವಾಗಿಯೇ ಕೇಳಿದ್ದಾರೆ ಓವೈಸಿ.

ಕೇಂದ್ರ ಸರ್ಕಾರದ ಈ ನಿಲುವು ನೋಡಿದ್ರೆ, ಮೋದಿ ಸರ್ಕಾರ ಪುರುಷ ಪ್ರಧಾನ ವ್ಯವಸ್ಥೆಗೆನೇ ಹೆಚ್ಚಿನ ಒಲವು ತೋರಿದಂತೆ ಇದೆ ಅಂತಲೂ ಓವೈಸಿ ದೂರಿದ್ದಾರೆ.

Edited By :
PublicNext

PublicNext

19/12/2021 07:42 am

Cinque Terre

50.98 K

Cinque Terre

14

ಸಂಬಂಧಿತ ಸುದ್ದಿ