ಮೈಸೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಡೆಸಿರೋ ಪುಂಡಾಟಿಕೆಯನ್ನ ಮಾಜಿ ಸಿಎಂ ಯಡಿಯೂರಪ್ಪ ತೀವ್ರವಾಗಿಯೇ ಖಂಡಿಸಿದ್ದಾರೆ. ಈ ವಿಚಾರವನ್ನ ವಿಧಾನ ಮಂಡಲದಲ್ಲೂ ಚರ್ಚೆ ಮಾಡುತ್ತೇವೆ ಅಂತಲೇ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಯಡಿಯೂರಪ್ಪನವರು, ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಉದ್ದಟತನ ತೋರಿದ್ದಾರೆ.ಇದನ್ನ ಯಾರು ಸಹಿಸೋದಿಲ್ಲ.
ಅದು ಸಂಗೊಳ್ಳಿ ರಾಯಣ್ಣ ಪ್ರತಿಮೆಯಾಗಿರಲಿ ಮತ್ತಾವುದೇ ಮಹನೀಯರ ಪ್ರತಿಮೆಯಾಗಿರಲಿ,
ಹಾನಿ ಮಾಡಬಾರದು.ಪ್ರತಿಮೆಗೆ ಹಾನಿಮಾಡಿದವರ ವಿರುದ್ಧ ಕೂಡಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಅಂತಲೇ ಹೇಳಿದ್ದಾರೆ ಎಂದು ಬಿಎಸ್‌ಯಡಿಯೂರಪ್ಪ ತಿಳಿಸಿದ್ದಾರೆ.
PublicNext
18/12/2021 02:26 pm