ಚಿಕ್ಕಮಗಳೂರು: ರಾಜ್ಯದಲ್ಲಿ ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿಸಲಾಗಿದೆ. ಅದಕ್ಕಾಗಿಯೇ ಜನ ಅರಾಜಕತವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡುಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮನವಿ ಮಾಡಿದ್ದಾರೆ.
ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟರು ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ. ಅಲ್ಲಿಯ ಸರ್ಕಾರ ಕಾಂಗ್ರೆಸ್ ಸರ್ಕಾರದ ಪಾಲುದಾರದ್ದೇ ಆಗಿದೆ ಎಂದು ಸಿ ಟಿ ರವಿ ಹೇಳಿದ್ದಾರೆ.
ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿಬಳಿಯುವ ಕೆಲಸ ಮಾಡಿದ್ರು. ಇವ್ರ ಉದ್ದೇಶ ಸಂಘರ್ಷ ಮಾಡಿಸೋದೇ ಆಗಿದೆ. ಕರ್ನಾಟಕ-ಮಹಾರಾಷ್ಟ್ರ ಸಂಘರ್ಷ ಆಗಲಿ ಅನ್ನೋದೇ ಈ ಒಟ್ಟು ಪುಂಡಾಟಿಕೆ ಮಾಡಿಸ್ತಿರೋರ ಸಂಚು ಅಂತಲೇ ಸಿಟಿ ರವಿ ಆರೋಪಿಸಿದ್ದಾರೆ.
PublicNext
18/12/2021 10:48 am