ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಪಿನ್ ರಾವತ್ ನಾಮಕರಣದ ವಿವಾದ-ಕಾಂಗ್ರೆಸ್-ಬಿಜೆಪಿ ಮುಖಂಡರ ವಾಗ್ವಾದ

ಕೊಪ್ಪಳ: ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ಇಡೀ ದೇಶ ದುಃಖ ಪಟ್ಟಿದೆ. ಆದರೆ ಕೊಪ್ಪಳದಲ್ಲಿ ಇವರ ಹೆಸರನ್ನ ಒಂದು ವೃತ್ತಕ್ಕೆ ಇಟ್ಟಿದಕ್ಕೆ ಎರಡು ಗುಂಪಿನ ಮಧ್ಯೆ ವಾಗ್ವಾದ ನಡೆದಿದೆ. ಪರಿಸ್ಥಿತಿನೂ ಕೆಲವು ಹೊತ್ತು ಬಿಗಡಾಯಿಸಿದೆ.

ಗಂಗಾವತಿಯ ಗಾಂಧಿ ವೃತ್ತದ ರಸ್ತೆಯ ಸರ್ಕಲ್ ಗೆ ಬಿಪಿನ್ ರಾವತ್ ನಾಮಕರಣ ಮಾಡಲಾಗಿದೆ. ಆದರೆ ಇದನ್ನ ವಿರೋಧಿಸಿದ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿರೋ ಗುಂಪು, ಬಿಪಿನ್ ರಾವತ್ ಹೆಸರಿನ ಬೋರ್ಡ್‌ನ್ನ ತೆರವುಗೊಳಿಸಬೇಕು ಎಂದು ಆಗ್ರಹಿಸಿದೆ.

ಸರ್ಕಲ್ ಗೆ ಈಗಾಗಲೇ ಇಸ್ಲಾಂಪುರ ಎಂದು ನಾಮಕರಣ ಮಾಡಲಾಗಿದೆ. ಇಸ್ಲಾಂಪುರ ಹೆಸರು ತೆಗೆದು ಬಿಪಿನ್ ರಾವತ್ ಹೆಸರು ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ.

ಈ ವಾಗ್ವಾದಿಂದ ಇಡೀ ರಸ್ತೆ ಬ್ಲಾಕ್ ಆಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಅನ್ನೂ ಮಾಡಿದ್ದರು. ಸೈನಿಕರ ಬಗ್ಗೆ ಇವರಿಗೆ ಗೌರವವೇ ಇಲ್ಲ ಎಂದು ಇಲ್ಲಿಗೆ ಆಗಮಿಸಿದ್ದ ಬಿಜೆಪಿ ಮುಖಂಡರು ದೂರಿದ್ದಾರೆ.

Edited By : Shivu K
PublicNext

PublicNext

16/12/2021 10:00 pm

Cinque Terre

46.07 K

Cinque Terre

5

ಸಂಬಂಧಿತ ಸುದ್ದಿ