ನವದೆಹಲಿ: ಬಿಹಾರದ ಮಾಜಿ ಸಿಎಂ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ದ್ವಿತೀಯ ಪುತ್ರ, ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ನಿನ್ನೆ (ಡಿ.9ರಂದು) ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ನವದೆಹಲಿಯಲ್ಲಿ ಖಾಸಗಿ ಆಗಿ ನಡೆದ ವಿವಾಹ ಸಂದರ್ಭದಲ್ಲಿ ತೇಜಸ್ವಿ ಯಾದವ್ ಅವರು ರಾಚೆಲ್ ಗಾಡಿನ್ಹೋ ಕೈ ಹಿಡಿದಿದ್ದಾರೆ. ಈ ಸಮಾರಂಭದಲ್ಲಿ ತೇಜಸ್ವಿ ಯಾದವ್ ಪೋಷಕರಾದ ಲಾಲ್ ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಸ್ವಿಯಾದವ್ ಸಹೋದರ- ಸಹೋದರಿಯರು ಮತ್ತು ಸಮಾಜವಾದಿ ಪಕ್ಷ ನಾಯಕ ಅಖೀಲೇಶ್ ಯಾದವ್ ಉಪಸ್ಥಿತರಿದ್ದರು.
32 ವರ್ಷದ ತೇಜಸ್ವಿಯಾದವ್ ಬಿಹಾರ ವಿಧಾನಸಭೆ ವಿಪಕ್ಷ ನಾಯಕರಾಗಿದ್ದಾರೆ. ಕಳೆದ ವರ್ಷದ ಬಿಹಾರ ಚುನಾವಣೆಯಲ್ಲಿ ಅವರು ತಮ್ಮ ಪಕ್ಷವನ್ನು ಪ್ರಬಲವಾಗಿ ಮುನ್ನಡೆಸಿದ ಆರ್ಜೆಡಿಯ ಪ್ರಬಲ ನಾಯಕರಾಗಿದ್ದಾರೆ. ಲಾಲ್ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿಯ 9 ಜನ ಮಕ್ಕಳಲ್ಲಿ ತೇಜಸ್ವಿ ಯಾದವ್ ಅತಿ ಕಿರಿಯರು. ಇವರಿಗೆ 7 ಜನ ಸಹೋದರಿಯರು ಮತ್ತು ತೇಜ ಪ್ರತಾಪ್ ಅಣ್ಣ ಇದ್ದಾರೆ.
PublicNext
10/12/2021 08:08 am