ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ : ಆರತಿ ಮಾಡಿದವರಿಗೆ ಗರಿಗರಿ ನೋಟು

ಬೀದರ್: ಬೀದರ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪರಿಷತ್ ಚುನಾವಣೆ ಪ್ರಚಾರಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೀದರ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಆರತಿ ಬೆಳಗಿ ಮಹಿಳೆಯರು ಸ್ವಾಗತ ಕೋರಿದರು.

ಈ ವೇಳೆ ಸಿಎಂ ಸಂಪ್ರದಾಯದಂತೆ ಆರತಿ ಬೆಳಗಿದವರ ತಟ್ಟೆಗೆ ನೋಟು ಹಾಕಿದ್ದಾರೆ. ಸದ್ಯ ಈ ವಿಚಾರ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣೆ ಪ್ರಚಾರ ನಡೆಸಿ ವಾಸ್ತವ್ಯ ಹೂಡಲು ಡಿ.ಕೆ. ಸಿದ್ರಾಮ್ ಮನೆಗೆ ಮುಖ್ಯಮಂತ್ರಿಗಳು ತೆರಳಿದ್ದರು. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿರುವ ಸಿದ್ರಾಮ ಮನೆಯಲ್ಲಿ ಆರತಿ ಬೆಳಗಿ ಮಹಿಳೆಯರಿಂದ ಸ್ವಾಗತ ಕೋರಲಾಯಿತು.

ಈ ವೇಳೆ ಪ್ರತಿಯೊಬ್ಬರ ಆರತಿ ತಟ್ಟೆಗೆ ಅವರು ಐನೂರು ರೂಪಾಯಿ ನೋಟುಗಳನ್ನ ಇಟ್ಟಿದ್ದಾರೆ.

Edited By : Nirmala Aralikatti
PublicNext

PublicNext

06/12/2021 08:26 am

Cinque Terre

58.13 K

Cinque Terre

4

ಸಂಬಂಧಿತ ಸುದ್ದಿ