ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಒಡೆದು ಹೋಗುತ್ತದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಹಲವಾರು ರಾಜ್ಯಗಳಲ್ಲಿ ಏಕಕಾಲದಲ್ಲಿ ವಿಸ್ತರಿಸುವ ಪ್ರಯತ್ನವನ್ನು ಉಲ್ಲೇಖಿಸಿದ ಓವೈಸಿ, ಅವರು ಇತರ ರಾಜ್ಯಗಳಲ್ಲಿ ಹೋರಾಟವನ್ನು ಮುಂದುವರೆಸಬೇಕು ಮತ್ತು ಕಾಂಗ್ರೆಸ್ ಎರಡು ಮೂರು ವರ್ಷದಲ್ಲಿ ಒಡೆದು ಚೂರಾಗುತ್ತದೆ ಎಂದರು.
ಓವೈಸಿಗೆ ರಾಹುಲ್ ಗಾಂಧಿ ನಾಯಕತ್ವದಲ್ಲಿ ನಂಬಿಕೆ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಯಾರು? ನನಗೆ ಆತನ ಪರಿಚಯವಿಲ್ಲ. ಅವರು ಯಾರೆಂದು ನಿಮಗೆ ತಿಳಿದಿದ್ದರೆ ದಯವಿಟ್ಟು ನನಗೆ ತಿಳಿಸಿ ಎಂದು ಓವೈಸಿ ಹೇಳಿದರು.
ಓವೈಸಿಗೆ ಪ್ರಶ್ನೆಗೆ ಉತ್ತರಿಸಿದ ತ್ರಿವೇದಿ, ಎಐಎಂಐಎಂನಂತಹ ಪಕ್ಷಗಳು ಮತ್ತು ಓವೈಸಿಯಂತಹ ನಾಯಕರು ಕಾಂಗ್ರೆಸ್‌ನಿಂದ ಬೆಳೆದು ಬಂದಿದ್ದಾರೆ ಎಂದರು.
PublicNext
04/12/2021 11:01 pm