ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ: ಹಾಸನ ಐಐಟಿ ವಿಚಾರ:ಪ್ರಧಾನಿ ಮೋದಿ ಭೇಟಿ ಆಗಿ ಎಲ್ಲ ವಿವರಿಸಿದ ದೇವೇಗೌಡರು

ದೆಹಲಿ: ಹಾಸನಕ್ಕೆ ಐಐಟಿ ಬೇಕು ಅಂತ ಪತ್ರ ಬರೆದಿದ್ದೆ.ಆದರೆ ಕೇಂದ್ರ ಶಿಕ್ಷಣ ಸಚಿವರು ಆಗೋದಿಲ್ಲ ಅಂತ ಹೇಳಿದ್ದರು. ಅದಕ್ಕೇನೆ ಖುದ್ ಪ್ರಧಾನಿಯನ್ನ ಭೇಟಿಯಾಗಿ ಎಲ್ಲವನ್ನೂ ವಿವರಿಸಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ಹಾಸನಕ್ಕೆ ಐಐಟಿ ಬೇಕು ಅಂತ ದೇವೇಗೌಡರು ಪತ್ರ ಬರೆಯುತ್ತಲೇ ಬಂದಿದ್ದಾರೆ. ಸಚಿವೆ ಸ್ಮೃತಿ ಇರಾನಿ ಅವರ ಕಾಲದಿಂದಲೂ ಪತ್ರ ವ್ಯವಹಾರ ನಡೆಯುತ್ತಿದೆ. ಇದಕ್ಕೂ ಹೆಚ್ಚಾಗಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಕರ್ನಾಟಕ ದಲ್ಲಿದ್ದಾಗ ಮಾಡಿದ ಯೋಜನೆ ಇದಾಗಿದೆ ಎಂದು ದೇವೇಗೌಡರು ಹೇಳಿದ್ದಾರೆ.

ಶಿಕ್ಷಣ ಸಚಿವರು ಹಾಸನದಲ್ಲಿ ಐಐಟಿ ಮಾಡಲು ಆಗೋದಿಲ್ಲ ಅಂದ್ರು. ಅದಕ್ಕೇನೆ ಈಗ ಪ್ರಧಾನಿ ನರೇಂದ್ರ ಮೋದಿಯವನ್ನ ಭೇಟಿಯಾಗಿದ್ದೇನೆ. ಎಲ್ಲವನ್ನೂ ವಿವರಿಸಿದ್ದೇನೆ. ಅಧಿವೇಶನ ಅಂತ್ಯವಾಗುವ ಮೊದಲು ಸಮಸ್ಯೆ ಬಗೆಹರಿಸಲು ಪ್ರಧಾನಿಗಳು ನಿರ್ಧರಿಸಿದ್ದಾರೆ ಅಂತಲೂ ದೇವೇಗೌಡರು ತಿಳಿಸಿದ್ದಾರೆ.

Edited By : Manjunath H D
PublicNext

PublicNext

30/11/2021 04:25 pm

Cinque Terre

64.88 K

Cinque Terre

2

ಸಂಬಂಧಿತ ಸುದ್ದಿ