ಕೊಪ್ಪಳ: ಭಯೋತ್ಪಾದಕರನ್ನ ಹುಟ್ಟುಹಾಕುವ ಪಕ್ಷ ಬಿಜೆಪಿನೋ ಕಾಂಗ್ರೆಸೋ ಅನ್ನೋದು ಗೊತ್ತಾಗಿದೆ. ಎಂ.ಎಂ.ಕಲಬುರ್ಗಿ ಕೊಲೆ ಮಾಡಿದ್ದು ಯಾರು ? ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಮಾಡಿದ್ದು ಯಾರು ? ಬಿಜೆಪಿಗರು ಭಯೋತ್ಪಾದಕರಷ್ಟೇ ಅಲ್ಲ ಕೊಲೆಗಡುಕರೂ ಹೌದು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಟೀಕಿಸಿದ್ದಾರೆ.
ಮಹಾನ್ ವ್ಯಕ್ತಿಗಳನ್ನ ಚಿಂತಕರನ್ನ ಪತ್ರಕರ್ತರನ್ನ ಕೊಲೆ ಮಾಡಿದವ್ರು ಬಿಜೆಪಿಗರೇ. ಭಯೋತ್ಪಾದಕರನ್ನ ಸೃಷ್ಟಿ ಮಾಡಿದವರೇ ಇವರು. ಅದರಲ್ಲು ವಿಶೇಷವಾಗಿ ನಳಿನ್ ಕುಮಾರ್ ಕಟೀಲು ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. ನಳಿನ್ ಕುಮಾರ್ ಕಟೀಲ್ ಈ ರಾಜ್ಯದ ಒಬ್ಬ ವೇಸ್ಟ್ ಅಧ್ಯಕ್ಷ ಎಂದು ಕೂಡ ಚುಚ್ಚಿದ್ದಾರೆ.
ಸಿದ್ದರಾಮಯ್ಯ ಒಬ್ಬ ಕುಡುಕ ಅಂತ ಈಶ್ವರಪ್ಪ ಹೇಳಿಕೆ ನೀಡಿದ್ದರು. ಅದಕ್ಕೆ ಉತ್ತರಿಸಿದ ಶಿವರಾಜ್ ತಂಗಡಗಿ,ಈಶ್ವರಪ್ಪ ಮುಖ ನೋಡಿದ್ರೆ ಕುಡಿದವರಿಗಿಂತಲೂ ಹೆಚ್ಚು ಕಾಣುತ್ತಾರೆ ಅಂತಲೂ ಕಾಮೆಂಟ್ ಮಾಡಿದ್ದಾರೆ ಶಿವರಾಜ್ ತಂಗಡಗಿ.
PublicNext
30/11/2021 03:33 pm