ಉಡುಪಿ: ಈ ದೇಶದ ಆರ್ಥಿಕ ಬೆಳವಣಿಗೆಗೆ, ಭದ್ರತೆಗೆ ಆರ್ ಎಸ್ ಎಸ್ ಕೊಡುಗೆ ಏನು ಎಂದು ಪ್ರಶ್ನಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಈ ದೇಶಕ್ಕೆ ಅವರ ಕೊಡುಗೆ ಏನೇನೂ ಇಲ್ಲ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಹಿಂದೆ ನಾನು ಕೆಲವು ವಿಷಯಗಳಲ್ಲಿ ತಾಲಿಬಾನಿಗೆ ಹೋಲಿಸಿದ್ದು ನಿಜ. ಆದರೆ ಎಲ್ಲ ವಿಷಯಗಳಲ್ಲಿ ಅಲ್ಲ.ಆರ್ ಎಸ್ ಎಸ್ ಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇಲೆ ನಂಬಿಕೆ ಇಲ್ಲ .ಮನುವಾದ ಮತ್ತು ಶ್ರೇಣೀಕೃತ ಸಮಾಜ ನಿರ್ಮಾಣ ಆಗಬೇಕು ಎಂಬ ಕನಸು ಆರ್ ಎಸ್ ಎಸ್ ನವರದ್ದು. ಆದರೆ ಕಾಂಗ್ರೆಸ್ ಪಕ್ಷ ಜಾತ್ಯತೀತ ಸಿದ್ಧಾಂತವನ್ನು ನಂಬಿರುವ ಪಕ್ಷ ಎಂದು ಹೇಳಿದ್ದಾರೆ.
PublicNext
25/11/2021 01:06 pm