ಮಂಡ್ಯ : ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಮುಸಲ್ಮಾನರೆ ಸಿಗೋದು ಎಂದು ಶಾಸಕ ಜಮೀರ್ ಅಹಮದ್ ಖಾನ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ನಲ್ಲಿ ಎರಡು ಬಣಗಳ ಚರ್ಚೆ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ.ಕಾಂಗ್ರೆಸ್ ನಲ್ಲಿ ಇರುವುದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಣ. ಡಿ.ಕೆ.ಶಿವಕುಮಾರ್ ಬಣನು ಇಲ್ಲ, ಸಿದ್ದರಾಮಯ್ಯ ಬಣನು ಇಲ್ಲ.
ಕುಮಾರಸ್ವಾಮಿ ಮುಸಲ್ಮಾನರನ್ನ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಬಲಿಕೊಡದಕ್ಕೆ ಅವರಿಗೆ ಸಿಗೋದೆ ಅಲ್ಪಸಂಖ್ಯಾತರು ಎಂದಿದ್ದಾರೆ. ಜೆಡಿಎಸ್ ನವರು ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಎಂಎಲ್ಸಿ ಟಿಕೆಟ್ ಕೊಟ್ಟಿದ್ದಾರೆ. ಅಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ.?
ಮುಸಲ್ಮಾನರ ಮೇಲೆ ಪ್ರೀತಿ ಇದ್ದರೆ ಹಾಸನದಲ್ಲಿ ಟಿಕೆಟ್ ಕೊಡಬೇಕಿತ್ತು. ರೇವಣ್ಣ ಮಗನಿಗೆ ಟಿಕೆಟ್ ಕೊಡುವ ಬದಲು ಕಾರ್ಯಕರ್ತರಿಗೊ, ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಿತ್ತು. ಮೈಸೂರು, ಮಂಡ್ಯ ಅಥವಾ ತುಮಕೂರಿನಲ್ಲಿ ಕೊಡ್ಬೇಕಿತ್ತು. ಮುಸ್ಲಿಂರಿಗೆ ಕೊಟ್ಟಂಗು ಆಗಬೇಕು, ಬಿಜೆಪಿಗೆ ಸಹಾಯ ಆಗ್ಬೇಕು ಎಂಬ ಕಾರಣಕ್ಕೆ ಸೋಲೋ ಕಡೆ ಕೊಡ್ತಾರೆ. ಅದಕ್ಕಾಗಿ ಮುಸಲ್ಮಾರನ್ನ ಬಲಿಕೊಡ್ತಾವ್ರೆ.
ಗೆಲ್ಲುವ ಕಡೆ ಕೊಟ್ರೆ ಕುಮಾರಸ್ವಾಮಿಗು ಪ್ರೀತಿ ಇದೆ ಅಂತ ಒಪ್ಕೋತ್ತೀವಿ. ರಾಮನಗರಕ್ಕೆ ರಾಜೀನಾಮೆ ಕೊಟ್ಟಾಗ ಅನಿತಕ್ಕನಿಗೆ ಟಿಕೆಟ್ ಕೊಡುವ ಬದಲು ಮುಸ್ಲಿಂರಿಗೆ ಕೊಡಬಹುದಿತ್ತು. ಜೆಡಿಎಸ್ ನಿಂದ ನೂರಕ್ಕೆ ನೂರರಷ್ಟು ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ. ಜೆಡಿಎಸ್ ಗೆಲ್ಲುವ ಕಡೆ ಅಲ್ಪಸಂಖ್ಯಾತರು ಬೇಕಾಗಿಲ್ಲ ಎಂದು ಜಮೀರ್ ಕಿಡಿ ಕಾರಿದ್ದಾರೆ.
PublicNext
25/11/2021 11:48 am