ಚಿಕ್ಕಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನೆರಪೀಡಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಭೇಟಿ ಬಳಿಕ ಶೀಘ್ರವೇ ಪರಿಹಾರ ನೀಡುವಂತೆ ಅಧಿಕಾರಿಗಳೂ ಸೂಚಿಸಿದ್ದಾರೆ. ಪೂರ್ಣ ಮನೆ ಬಿದ್ದರೆ 5 ಲಕ್ಷ ಮತ್ತು ಭಾಗಶಃ ಮನೆ ಬಿದ್ದರೆ 3 ಲಕ್ಷ ಅಲ್ಪ ಬಿದ್ದ ಮನೆಗೆ 50 ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಭಾರಿ ಹಾನಿ ಆಗಿದೆ. 24 ಮನೆಗಳು ನೆಲಸಮ, 1078 ಮನೆಗಳು ಭಾಗಶಃ ಹಾನಿ,
5 ದೊಡ್ಡವು 46 ಸಣ್ಣ ಪ್ರಮಾಣದ ಜಾನುವಾರುಗಳು ಸಾವು ಆಗಿದೆ.ಅದ್ಕಕೇನೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳಿಗೂ ಪರಿಹಾರ ಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳುವಂತೆನೂ ಸೂಚಿಸಿದ್ದಾರೆ.
ಬೆಳೆಹಾನಿ ಸಮೀಕ್ಷೆ ವರದಿಯನ್ನೂ ಶೀಘ್ರದಲ್ಲಿಯೇ ತೆರೆಸಿಕೊಳ್ಳುವುದಾಗಿ ಹೇಳಿರೋ ಸಿಎಂ ಬಸವರಾಜ್ ಬೊಮ್ಮಾಯಿ ಈಗ ಪ್ರಾಥಮಿಕ ಸರ್ವೆ ಮಾಡಿದ್ದೇವೆ. ಜಿಲ್ಲಾಡಳಿತದ ವಂತಿಗೆಯ ಹಣವನ್ನ ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ ಬಸವರಾಜ್ ಬೊಮ್ಮಾಯಿ.
PublicNext
21/11/2021 07:16 pm