ಗದಗ: ಬಿಜೆಪಿ ಪಕ್ಷದ ಬಲವರ್ಧನೆಗಾಗಿ ಜನಸ್ವರಾಜ್ ಸಮಾವೇಶ ರಾಜ್ಯದೆಲ್ಲೆಡೆ ನಡೆಯುತ್ತಿದ್ದು. ಗದಗದ ನೇತೃತ್ವ ವಹಿಸಿಕೊಂಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅಂಬೇಡ್ಕರ್ ಅವರು ಜಗತ್ತೇ ಅಚ್ಚರಿಗೆ ಒಳಗಾಗುವಂತೆ ಸಂವಿಧಾನ ನೀಡಿದ್ದಾರೆ. ಆದರೆ ಅವರೊಂದಿಗೆ ಕಾಂಗ್ರೆಸ್ ಸರ್ಕಾರ ಅಗೌರವದಿಂದ ನಡೆದುಕೊಂಡಿದೆ, ಚುನಾವಣೆಯ ಸೋಲಿಗೆ ಕಾರಣವಾದದ್ದಲ್ಲದೇ, ದೆಹಲಿಯಲ್ಲಿ ಅವರ ಶವಸಂಸ್ಕಾರಕ್ಕೂ ಅವಕಾಶ ಕೊಡಲಿಲ್ಲ. ನಂತರ ಮುಂಬೈನ ದಾಬರ್ ಸಮುದ್ರದ ಪಕ್ಕ ಅಂತ್ಯ ಸಂಸ್ಕಾರ ನಡೆಯುವಂತೆ ನೋಡಿಕೊಂಡಿತು.
ಇಂತಹ ಪಕ್ಷಕ್ಕೆ ದೀನದಲಿತರ ಹಾಗೂ ಅಂಬೇಡ್ಕರ್ ರವರ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವಿಲ್ಲ, ನಿರ್ಗತಿಕರ ಸಹಾಯಕ್ಕೆ ಬಿಜೆಪಿ ಸದಾ ಮುಂದಿದೆ ಎಂದು ಸಮರ್ಥಿಸಿಕೊಂಡರು.
ಇಂದು ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಲೋಕ ಸಭೆಯಲ್ಲೂ ಬೆರಳಣಿಕೆಯಷ್ಟು ಜನರಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಕರ್ನಾಟಕ ರಾಜ್ಯ ಮಾತ್ರ ಸ್ವಲ್ಪ ಉಸಿರಾಡುವಂತಿದೆ, ನಮ್ಮ ಪಕ್ಷದ ಬಗ್ಗೆ ಅಲ್ಪಸಂಖ್ಯಾತರ ಬಳಿ ಸುಳ್ಳು ವದಂತಿ ಹಬ್ಬಿಸುವ ಈ ಪಕ್ಷ ಕೊನೆಯಾಗಬೇಕು ಎಂದು ಬಿಎಸ್ವೈ ಹರಿಹಾಯ್ದರು.
PublicNext
20/11/2021 12:34 pm