ಉಡುಪಿ: ಕೇಂದ್ರ ಸರಕಾರದಿಂದ ಕೃಷಿ ಕಾಯ್ದೆ ವಾಪಸ್ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು
ಪರಿಷ್ಕೃತವಾಗಿ ಮತ್ತೆ ಮರು ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪೂರ್ಣ ಅಧ್ಯಯನ ಮಾಡಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ.ಚುನಾವಣೆಗೆ ಮತ್ತು ಇದಕ್ಕೆ ಸಂಬಂಧ ಇಲ್ಲ.ಕೃಷಿಕರು, ಎಪಿಎಂಸಿ ಪರವಾಗಿ ಇದ್ದ ಕಾಯಿದೆ ಇದು.ಕೃಷಿಕರಿಗೆ ಆರ್ಥಿಕ ಶಕ್ತಿ ಕೊಡಲು ಮಾಡಿದ್ದ ಕಾಯಿದೆ.ಒಂದಷ್ಟು ಚರ್ಚೆ ಇರುವ ಕಾರಣ ಮರುಮಂಡನೆ ಮಾಡುವ ಸಾಧ್ಯತೆ ಇದೆ.
ಪ್ರಜಾಪ್ರಭುತ್ವದಲ್ಲಿ ಮಣಿಯುವುದು, ಸೋಲುವುದು ಎಂದೇನಿಲ್ಲ. ಅನೇಕ ಬಾರಿ ಕಾಯಿದೆಗಳ ತಿದ್ದುಪಡಿ ಆಗಿದೆ.ಮತ್ತಷ್ಟು ಉತೃಷ್ಟವಾಗಿ ಮರುಮಂಡನೆ ಆಗುವ ಸಾಧ್ಯತೆ ಇದೆ. ರೈತರ ಹಿತಕ್ಕಾಗಿ ತಂದಿರುವ ಕಾಯಿದೆ ಇದಾಗಿತ್ತು ಎಂದು ಹೇಳಿದ್ದಾರೆ.
PublicNext
19/11/2021 01:05 pm