ಬೆಂಗಳೂರು: ಬಿಟ್ ಕಾಯಿನ್ ಹಗರಣವು ಇದೀಗ ರಾಜಕೀಯ ನಾಯಕರ ವೈಯಕ್ತಿಕ ಮಟ್ಟ ಆರೋಪ ಪ್ರತ್ಯಾರೋಪಕ್ಕೆ ತಲುಪಿದೆ. ಹೀಗೆ ಬಿಟ್ ಕಾಯಿನ್ ಕೆಸರೆರಚಾಟದಲ್ಲಿ ದಿವಂಗತ ಪುತ್ರ ರಾಕೇಶ್ ಅವರನ್ನು ಎಳೆದು ತಂದ ಬಿಜೆಪಿ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಮ್ಮ ಅವಧಿಯಲ್ಲಿ ಬಿಟ್ ಕಾಯಿನ್ ವಿಚಾರ ಗೊತ್ತಿರಲಿಲ್ಲ. ಆಗ ಗೊತ್ತಿದ್ದರೆ ನಾವು ಆಗಲೇ ಬಲಿ ಹಾಕುತ್ತಿದ್ದೆವು. ರಾಕೇಶ್ ಈಗ ಬದುಕಿದ್ದಾರಾ?. ಬದುಕಿಲ್ಲದವರ ಬಗ್ಗೆ ಮಾತನಾಡಿ ಏನು ಪ್ರಯೋಜನ. ಬಿಜೆಪಿಯವರಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ ಎಂದು ಕಿಡಿಕಾರಿದರು.
PublicNext
18/11/2021 04:43 pm